ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ವಿಜೃಂಭಣೆಯ ಬಪ್ಪನಾಡು ಶ್ರೀ ಗಣಪತಿ ಶೋಭಾಯಾತ್ರೆ

ಮುಲ್ಕಿ: ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆದ 51ನೇ ವರ್ಷದ ಶ್ರೀ ಗಣೇಶೋತ್ಸವದ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ವೇದಮೂರ್ತಿ ಕೃಷ್ಣರಾಜ ಭಟ್ ನೇತೃತ್ವದಲ್ಲಿ ಶ್ರೀ ಗಣಪತಿ ದೇವರಿಗೆ ರಂಗಪೂಜೆ, ವಿಸರ್ಜನಾ ಪೂಜೆ ನಡೆದು ವಿವಿಧ ಬಿರುದಾವಳಿಗಳೊಂದಿಗೆ ಭವ್ಯವಾದ ಶೋಭಾಯಾತ್ರೆಯು ಬಪ್ಪನಾಡು ದೇವಸ್ಥಾನದಿಂದ ಹೊರಟು ಪಂಚಮಹಲ್, ಬಿಲ್ಲವ ಸಮಾಜ ಸೇವಾ ಸಂಘ, ಮುಲ್ಕಿ ಬಸ್ ನಿಲ್ದಾಣ, ಬಪ್ಪನಾಡು ರಥಬೀದಿ ಮೂಲಕ ಬಡಗು ಹಿತ್ಲು ಜಲಕದ ಕಟ್ಟೆಯಲ್ಲಿ ವಿಸರ್ಜನೆ ಮಾಡಲಾಯಿತು. ಈ ಸಂದರ್ಭ ಬಪ್ಪನಾಡು ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಯದು ನಾರಾಯಣ ಶೆಟ್ಟಿ, ಅಧ್ಯಕ್ಷ ಸುನಿಲ್ ಆಳ್ವ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By :
PublicNext

PublicNext

18/09/2026 06:06 pm

Cinque Terre

6.87 K

Cinque Terre

0

ಸಂಬಂಧಿತ ಸುದ್ದಿ