ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಲೆಯಿಂದ ಮನೆಗೆ 4 ಕಿ.ಮೀ ಪ್ರಯಾಣಕ್ಕೆ 2.5 ಗಂಟೆ; ವಾರ್ತೂರು-ಗುಂಜೂರು ಭಾಗದ ಸಂಚಾರ ದುರವಸ್ಥೆ

ಬೆಂಗಳೂರು: ವಾರ್ತೂರು ಮತ್ತು ಗುಂಜೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯಿಂದ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಶಾಲೆಯಿಂದ ಮನೆಗೆ ಕೇವಲ 4 ಕಿ.ಮೀ ದೂರವಿದ್ದರೂ ಮಕ್ಕಳಿಗೆ ಇಂದು ಮನೆ ತಲುಪಲು ಬರೋಬ್ಬರಿ ಎರಡೂವರೆ ಗಂಟೆ ಸಮಯ ಬೇಕಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಲಾಗಿದೆ.

ಇದು ಒಂದೇ ದಿನದ ಸಮಸ್ಯೆಯಲ್ಲ. ಬಹುತೇಕ ಪ್ರತಿದಿನವೂ ಇದೇ ರೀತಿಯ ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಮುಖ ರಸ್ತೆಗಳಲ್ಲಿನ ವಾಹನ ದಟ್ಟಣೆಯಿಂದ ಶಾಲಾ ಮಕ್ಕಳು, ಪೋಷಕರು ಹಾಗೂ ಸಾರ್ವಜನಿಕರು ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕುವಂತಾಗಿದೆ.

ವಾರ್ತೂರು-ಗುಂಜೂರು ಭಾಗದಲ್ಲಿ ಹಲವು ಅಂತಾರಾಷ್ಟ್ರೀಯ ಶಾಲೆಗಳು, ಪ್ರಮುಖ ಐಟಿ ಕಂಪನಿಗಳು ಹಾಗೂ ಲಕ್ಷಾಂತರ ಜನರು ವಾಸಿಸುತ್ತಿದ್ದರೂ, ಸಂಚಾರ ವ್ಯವಸ್ಥೆ ಮಾತ್ರ ಸಮರ್ಪಕವಾಗಿಲ್ಲ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ.

ಕೇವಲ 4 ಕಿ.ಮೀ ಪ್ರಯಾಣಕ್ಕೆ ಎರಡೂವರೆ ಗಂಟೆ ಬೇಕಾಗುತ್ತಿರುವ ಪರಿಸ್ಥಿತಿ ಮಕ್ಕಳ ಹಾಗೂ ಸಾರ್ವಜನಿಕರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರುತ್ತಿದ್ದು, ಸಂಚಾರ ದಟ್ಟಣೆ ನಿವಾರಣೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

Edited By : Somashekar
PublicNext

PublicNext

18/09/2026 07:40 pm

Cinque Terre

6.92 K

Cinque Terre

0

ಸಂಬಂಧಿತ ಸುದ್ದಿ