ಕಲಬುರಗಿ- ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿ ಹಾಗೂ ಬಸವಣ್ಣ ನವರ ಪೋಟೋ ಪಕ್ಕದಲ್ಲೇ ಚಪ್ಪಲಿ ಇಟ್ಟು ಅಪಮಾನ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸ್ಟೇಷನ್ ಗಣಗಾಪುರ ದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಗೋಡೆಗೆ ಹಾಕಿದ ಪೋಟೋಗಳು ತೆಗೆದು ಮೂಲೆಯಲ್ಲಿ ಇಟ್ಟು, ನೀರು ಕುಡಿದು ಖಾಲಿ ಆದ ಬಾಟಲ್ ಗಳು ಪೋಟೋ ಮೇಲೆ ಇಟ್ಟು ಮಹಾಪುರುಷರಿಗೆ ಅವಮಾನ ಮಾಡಲಾಗಿದ್ದು ಈ ಕುರಿತು ಪ್ರಬುದ್ಧ ಭಾರತ ಸಂಘರ್ಷ ಸಮಿತಿಯಿಂದ ಕೇಂದ್ರದ ವೈದ್ಯಧಿಕಾರಿಗೆ ಪ್ರಶ್ನೆ ಮಾಡಿದರೆ. ಬೇಕು ಅಂತಲೇ ಯಾರೋ ಮಾಡಿರಬೇಕು ಎಂದು ಉಡಾಫೆಯಾಗಿ ಉತ್ತರ ನೀಡುತ್ತಾರೆ.
ಅಪಘಾತದಲ್ಲಿ ಗಾಯಗೊಂಡು ತುರ್ತು ಚಿಕಿತ್ಸೆ ಗೆ ಬಂದಿದ ಯುವಕನಿಗೆ ಆಸ್ಪತ್ರೆಯಲ್ಲಿ ಯಾರು ಇಲ್ಲದ ತೊಂದರೆ ಅನುಭವಿಸಲಾಗಿದೆ
ಆಸ್ಪತ್ರೆಯಲ್ಲಿ ಸರಿಯಾಗಿ ಮೂಲಸೌಕರ್ಯ ವಿಲ್ಲದೆ, ಸಮಯಕ್ಕೆ ಸರಿಯಾಗಿ ಸಿಬ್ಬಂದಿಗಳು ಆಗಮಿಸದೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗುತ್ತಿಲ್ಲ, ಎಂದು ಪ್ರಬುದ್ದ ಭಾರತ ಸಂಘರ್ಷ ಸಮಿತಿ ಸಂಸ್ಥಾಪಕ ಸಂಚಾಲಕರು ಅಶ್ವಿನಿ ಮದನಕರ್ ಅವರು ಆಸ್ಪತ್ರೆ ವಿರುದ್ಧ ಕಿಡಿಕಾರಿದರು. ಕೂಡಲೇ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ಆಸ್ಪತ್ರೆ ವೈದ್ಯಧಿಕಾರಿ ಅಮಾನತು ಮಾಡಬೇಕೆಂದು ಒತ್ತಾಯಿಸಿದರು
Kshetra Samachara
18/09/2026 08:34 pm
LOADING...