ಗದಗ : ಇಂದಿನ ಕಾಲದಲ್ಲಿ ಡಿಜೆ ಅಬ್ಬರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಆಚರಣೆಗಳು ಮರೆಯಾಗುತ್ತಿರುವುದು ವಿಷಾದನೀಯ. ಇಂತಹ ಸಂದರ್ಭದಲ್ಲಿ ಸುವರ್ಣಗಿರಿ ತಾಂಡಾದಲ್ಲಿ ಭಜನಾ ಸ್ಪರ್ಧೆ ಆಯೋಜಿಸಿರುವುದು ಸಂತಸದ ವಿಷಯವಾಗಿದೆ ಎಂದು ಐ.ಎಸ್. ಪೂಜಾರ ಹೇಳಿದರು.
ಸುವರ್ಣಗಿರಿ ತಾಂಡಾದಲ್ಲಿ ಆಯೋಜಿಸಿದ್ದ ಭಾರಿ ಸವಾಲ್–ಜವಾಬ್ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಜನರಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಭಜನೆ, ಜಾನಪದ ಕಲೆ ಹಾಗೂ ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಮುಂದುವರಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿವಣ್ಣ ಲಮಾಣಿ, ಪುಂಡಲೀಕ ಲಮಾಣಿ, ಥಾವರಪ್ಪ ಲಮಾಣಿ, ಗೋಪಿ ನಾಯಕ, ಬಸವರಾಜ ಪೂಜಾರ, ರವಿ ಲಮಾಣಿ, ನಾಗರಾಜ ಲಮಾಣಿ, ಶಿವು ಪೂಜಾರ, ಗಂಗಾಧರ ಲಮಾಣಿ, ಗಣೇಶ ಲಮಾಣಿ, ದ್ಯಾಮಣ್ಣ ಲಮಾಣಿ ಸೇರಿದಂತೆ ತಾಂಡಾದ ಮುಖಂಡರು, ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
19/09/2026 03:09 pm
LOADING...