ಶಿರಹಟ್ಟಿ : ಪಟ್ಟಣದ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಹೆಸರಾದ ಶ್ರೀ ಹಜರತ್ ಮೆಹಬೂಬ್ ಸುಭಾನಿ (ರಹಾ) ಉರುಸು ಮುಬಾರಕ್ ನಡೆಯಲಿದೆ ಎಂದು ದರ್ಗಾದ ಮುಜಾವರ ಶ್ರೀ ಮೊಹಮ್ಮದ್ ಖುರೇಶ್ ಮನಿಯಾರ ಹೇಳಿದರು.
ಸೆಪ್ಟೆಂಬರ್ 21ರಂದು ಸೋಮವಾರ ಗಂಧ (ಸಂದಾಲ್), ಸೆಪ್ಟೆಂಬರ್ 22ರಂದು ಮಂಗಳವಾರ ಉರುಸು ಹಾಗೂ ಸೆಪ್ಟೆಂಬರ್ 23ರಂದು ಬುಧವಾರ ತವಾಫ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಭಕ್ತಾಧಿಗಳು ಈ ಪುಣ್ಯಕ್ಷೇತ್ರಕ್ಕೆ ಆಗಮಿಸಿ ಪೀರಾನೇ ಪೀರ ಹಜರತ್ ಮೆಹಬೂಬ್ ಸುಭಾನಿ (ರಹಾ) ಅವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮೆಹಬೂಬ್ ಸುಭಾನಿ ದರ್ಗಾದ ಸದ್ಭಕ್ತ ನಜೀರ್ ಅಹಮದ್ ಡಂಬಳ ಮಾತನಾಡಿ, ಹಜರತ್ ಮೆಹಬೂಬ್ ಸುಭಾನಿ ಉರುಸು ಮುಬಾರಕ್ ಭಾವೈಕ್ಯತೆಯ ಸಂಕೇತವಾಗಿದೆ. ಇಲ್ಲಿ ಜಾತಿ, ಮತ, ಪಂಥ ಹಾಗೂ ಭೇದ-ಭಾವವಿಲ್ಲದೆ ಎಲ್ಲಾ ಧರ್ಮದವರು ಒಗ್ಗೂಡಿ ಸಂಭ್ರಮದಿಂದ ಆಚರಣೆ ಮಾಡುತ್ತಾರೆ ಎಂದರು.
ಈ ಪುಣ್ಯಕ್ಷೇತ್ರಕ್ಕೆ ಮುಸ್ಲಿಂ ಬಾಂಧವರಿಗಿಂತಲೂ ನಮ್ಮ ಸಹೋದರರಾದ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅಲ್ಲದೆ ವಿವಿಧ ರಾಜ್ಯಗಳು ಹಾಗೂ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದರ್ಗಾಕ್ಕೆ ಆಗಮಿಸುತ್ತಾರೆ. ಆದ್ದರಿಂದ ಇಂತಹ ಪುಣ್ಯಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ದರ್ಗಾದ ಮುಜಾವರಾದ ಅಸಗರ ಅಲಿ ಮನಿಯಾರ, ಅಬ್ರು ಮನಿಯಾರ, ಹಜರತಲಿ ಮನಿಯಾರ ಹಾಗೂ ದರ್ಗಾದ ಭಕ್ತಾಧಿಗಳಾದ ಮಾಬುಸಾಬ ಕುಬಸದ, ರೀಯಾಜ್ ತಹಶೀಲ್ದಾರ್, ಸಾದಿಕ್ ಮುಳಗುಂದ, ರೀಯಾಜ್ ಲಕ್ಷ್ಮೇಶ್ವರ, ಬಶೀರ್ ಪಟಾವೇಗಾರ, ಜಾಫರ್ ಅತ್ತಾರ, ಹಸನ್ ತಹಶೀಲ್ದಾರ್, ದಾದಾಪೀರ ಪರೀಟ್ ಸೇರಿದಂತೆ ಇತರ ಭಕ್ತಾಧಿಗಳು ಉಪಸ್ಥಿತರಿದ್ದರು.
PublicNext
20/09/2026 09:11 am