ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೈದ್ಯಕೀಯ ಕಾಲೇಜುಗಳ ವಿಚಾರದಲ್ಲಿ ಕರ್ನಾಟಕ ನಂ.1: ಪ್ರಭಾಕರ ಕೋರೆ ಕಾರ್ಯ ಶ್ಲಾಘಿಸಿದ ಸಚಿವ ಶರಣಪ್ರಕಾಶ್ ಪಾಟೀಲ

ಹುಬ್ಬಳ್ಳಿ: ವೈದ್ಯಕೀಯ ಕಾಲೇಜುಗಳ ವಿಚಾರದಲ್ಲಿ ಕರ್ನಾಟಕ ನಂಬರ್ ಒನ್ ಆಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ ಹೇಳಿದರು.

ಹುಬ್ಬಳ್ಳಿಯಲ್ಲಿ ಕೆಎಲ್ಇ ಕಾಲೇಜಿನ ಲೋಕಾರ್ಪಣೆ ವೇಳೆ ಮಾತನಾಡಿದ ಅವರು,‌ ದೇಶದಲ್ಲಿಯೇ ಅತೀ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ.‌ ಹೀಗಾಗಿ ಕರ್ನಾಟಕ ಹೆಲ್ತ್ ಹಬ್ ಆಗಿದೆ.‌ ಕರ್ನಾಟಕದ ಪ್ರತಿಭಾವಂತರನ್ನು ಜಗತ್ತು ನೋಡ್ತಿದೆ‌ ಎಂದರು.

ಕರ್ನಾಟಕದ ಬೆಳವಣಿಗೆ ಯಲ್ಲಿ ಕೆ.ಎಲ್.ಇ ದೊಡ್ಡದು. ಕೆ.ಎಲ್.ಇ ಸಂಸ್ಥೆ ಶೈಕ್ಷಣಿಕವಾಗಿ ಅಪಾರ ಕೊಡುಗೆ ನೀಡಿದೆ.‌ 34 ಸಂಸ್ಥೆಗಳಿದ್ದದ್ದನ್ನು 320 ಸ್ಥಾನಗಳಿಗೆ ಹೆಚ್ಚಿಸಿದ ಕೀರ್ತಿ ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತೆ‌ ಎಂದು ಹುಬ್ಬಳ್ಳಿಯಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ ಹೇಳಿದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/09/2026 04:41 pm

Cinque Terre

9.9 K

Cinque Terre

0

ಸಂಬಂಧಿತ ಸುದ್ದಿ