ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜಗತ್ತಿಗೇ ಭಾರತದ ವೈದ್ಯರ ಮೇಲೆ ಅಪಾರ ವಿಶ್ವಾಸ; ಕೆಎಲ್ಇ ಕೊಂಡಾಡಿದ ಕೇಂದ್ರ ಸಚಿವ ಜೋಶಿ

ಹುಬ್ಬಳ್ಳಿ: ಇಡೀ ಜಗತ್ತಿಗೆ ಭಾರತದ ವೈದ್ಯರ ಮೇಲೆ ಅಪಾರ ವಿಶ್ವಾಸವಿದೆ.‌ ಪಾಶ್ಚಾತ್ಯ ದೇಶಗಳಲ್ಲಿ ಲೀಡಿಂಗ್ ವೈದ್ಯರು ನಮ್ಮ ಭಾರತೀಯರೇ ಆಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು‌.

ಹುಬ್ಬಳ್ಳಿಯಲ್ಲಿ ಕೆಎಲ್ಇ ಕಾಲೇಜು ಮತ್ತು ಆಸ್ಪತ್ರೆಯ ಲೋಕಾರ್ಪಣೆ ವೇಳೆ ಮಾತನಾಡಿದ ಅವರು, ಕೆ.ಎಲ್.ಇ ಸೊಸೈಟಿ ಹುಬ್ಬಳ್ಳಿಯಲ್ಲಿಯೂ ವೈದ್ಯಕೀಯ ಕಾಲೇಜು ಆರಂಭಿಸಿದೆ. ಈ ಭಾಗಕ್ಕೆ ಕೆ.ಎಲ್.ಇ ಸೊಸೈಟಿಯಿಂದ ಬಹುದೊಡ್ಡ ಕೊಡುಗೆ ನೀಡಿದೆ. ಜಗತ್ತಿನಲ್ಲಿ ಹಲವಾರು ದೇಶಗಳು ವಯಸ್ಸಾದ ಸ್ಥಿತಿಯಲ್ಲಿವೆ‌. ನಮ್ಮ ಭಾರತ ಯೌವ್ವನದ ಸ್ಥಿತಿಯಲ್ಲಿದೆ. ಭಾರತ ಜಗತ್ತಿನ ಫಾರ್ಮಾ ಹಬ್ ಆಗಿದೆ‌ ಎಂದರು.

ಮೊದಲು ಭಾರತದಲ್ಲಿ ಕೇವಲ ಪೊಟ್ಯಾಟೊ ಚಿಪ್ಸ್ ಮಾತ್ರ ತಯಾರಿಸಲಾಗುತ್ತಿತ್ತು. ಆದ್ರೆ ಈಗ ಸೆಮಿ ಕಂಡಕ್ಟರ್ ನಿಂದ ಚಿಪ್ ತಯಾರಿಕೆವರೆಗೂ ಭಾರತ ಸ್ವಾವಲಂಬಿಯಾಗಿದೆ. ಜಗತ್ತಿನ ಆರ್ಥಿಕತೆಯಲ್ಲಿ ಭಾರತ ಬಹುದೊಡ್ಡ ಸಾಧನೆ ಮಾಡಿದೆ.‌ ದೇಶದ 126 ಜಿಲ್ಲೆಗಳಲ್ಲಿ ನಕ್ಸಲೀಸಮ್ ಇತ್ತು. ಅದನ್ನು ಹತ್ತಿಕ್ಕಿದ ಕೀರ್ತಿ ಮೋದಿ ಅವ್ರಿಗೆ ಸಲ್ಲುತ್ತೆ ಎಂದು ಅವರು ಹೇಳಿದರು.

ದೇಶದಲ್ಲಿ 751 ಕಾಲೇಜುಗಳಿವೆ. 22 ಏಮ್ಸ್ ದೇಶದಲ್ಲಿ ಅಸ್ತಿತ್ವಕ್ಕೆ ಬಂದಿವೆ. ದೇಶದಲ್ಲಿ 1.37 ಲಕ್ಷ ವೈದ್ಯಕೀಯ ಸೀಟುಗಳು ಲಭ್ಯವಿವೆ. ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಆಗಿದೆ ಎಂದು ವೈದ್ಯಕೀಯ ಕಾಲೇಜು ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ ಹೇಳಿದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/09/2026 04:46 pm

Cinque Terre

7.86 K

Cinque Terre

0

ಸಂಬಂಧಿತ ಸುದ್ದಿ