ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಟ್ಟೆಕಿಚ್ಚಿನಿಂದ ಸಚಿವ ಸತೀಶ ಜಾರಕಿಹೊಳಿ ಮೇಲೆ ಇಡಿ ದಾಳಿ: ಶಾಸಕ ಎನ್.ಎಚ್. ಕೋನರೆಡ್ಡಿ

ಧಾರವಾಡ : ಸಚಿವ ಸತೀಶ ಜಾರಕಿಹೊಳಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾರೆಂಬ ಹೊಟ್ಟೆಕಿಚ್ಚಿನ ಕಾರಣದಿಂದಾಗಿ ಅವರ ಮೇಲೆ ಇಡಿ ದಾಳಿ ಮಾಡಲಾಗಿದೆ ಎಂದು ಶಾಸಕ ಎನ್.ಎಚ್. ಕೋನರೆಡ್ಡಿ ತಿಳಿಸಿದರು.

ಧಾರವಾಡದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಸತೀಶ ಜಾರಕಿಹೊಳಿ ಅವರ ಹೆಸರಿಗೆ ಕಳಂಕ ತರುವ ಯತ್ನ ಇದಾಗಿದೆ. ಅಧಿಕಾರ ಇದ್ದಾಗ ಯಾರೂ ಕೂಡ ಇಂಥ ಕ್ಷುಲ್ಲಕ ಕೆಲಸ ಮಾಡಬಾರದು. ಪ್ರಜಾಪ್ರಭುತ್ವದ ಮೇಲೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಿದ್ಧಾಂತದ ಮೇಲೆ ನಮಗೆ ವಿಶ್ವಾಸವಿದೆ. ಯಾರೂ ಇಂಥ ನೀಚ ಕೆಲಸ ಮಾಡಬಾರದು. ಮುಂದೆ ಅವರಿಗೂ ಇಂಥ ಸ್ಥಿತಿ ಬರಬಹುದು ಎಂದು ಹೇಳಲು ಬಯಸುತ್ತೇನೆ ಎಂದರು.

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/09/2026 03:49 pm

Cinque Terre

2.63 K

Cinque Terre

0

ಸಂಬಂಧಿತ ಸುದ್ದಿ