ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಲೋಕ ಅದಾಲತ್‌ನಲ್ಲಿ 318 ಪ್ರಕರಣ ಇತ್ಯರ್ಥ

ನವಲಗುಂದ : ಕಾನೂನು ಸೇವಾ ಸಮಿತಿಯ ವತಿಯಿಂದ ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಿವಿಧ ಬಾಕಿ ಇರುವ ಪ್ರಕರಣಗಳು ಸೇರಿದಂತೆ ಒಟ್ಟು 318 ಪ್ರಕರಣಗಳು ಇತ್ಯರ್ಥಗೊಂಡವು.

ಇವುಗಳಲ್ಲಿ ಅಪರಾಧಿಕ ಪ್ರಕರಣಗಳು 2, ಚೆಕ್ ಬೌನ್ಸ್ ಪ್ರಕರಣಗಳು 6, ಹಣ ವಸೂಲಾತಿ ಪ್ರಕರಣಗಳು 4, ಮೋಟಾರು ವಾಹನ ಪ್ರಕರಣ 1, ಸಿವಿಲ್ ಪ್ರಕರಣಗಳು 44, ಜನನ ನೋಂದಣಿ ಪ್ರಕರಣಗಳು 52, ಲಘು ಪ್ರಕರಣಗಳು 200, ಪೂರ್ವ ವ್ಯಾಜ್ಯ ಪ್ರಕರಣಗಳು 64 ಹಾಗೂ ಇತರೆ ಪ್ರಕರಣಗಳು 9 ಸೇರಿವೆ.

ನ್ಯಾಯಾಂಗ ಸಂಧಾನಕಾರರಾಗಿ ಹಿರಿಯ ಸಿವಿಲ್ ನ್ಯಾಯಾಧೀಶ ಮಂಜುನಾಥ ಪಿ. ಪಾನಘಂಟಿ ಹಾಗೂ ಸಿವಿಲ್ ನ್ಯಾಯಾಧೀಶ ಮಲ್ಲಿಕಾರ್ಜುನ, ಸಂಧಾನಕಾರ ವಕೀಲರಾಗಿ ರುದ್ರಗೌಡ ಪಾಟೀಲ ಭಾಗವಹಿಸಿದ್ದರು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಮಂಜುನಾಥ ಪಿ. ಪಾನಘಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

20/09/2026 10:54 am

Cinque Terre

6.38 K

Cinque Terre

0

ಸಂಬಂಧಿತ ಸುದ್ದಿ