ಹುಬ್ಬಳ್ಳಿ : ಕೆ.ಎಲ್.ಇ. ಹುಟ್ಟಿ 110 ವರ್ಷಗಳಾಗಿವೆ. 32 ಇದ್ದ ಸಂಸ್ಥೆಗಳು ಇದೀಗ 320 ಸಂಸ್ಥೆಗಳಾಗಿದ್ದು, 18 ಸಾವಿರ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ ಎಂದು ಕುಲಾಧಿಪತಿ ಪ್ರಭಾಕರ ಕೋರೆ ಹೇಳಿದರು.
ಹುಬ್ಬಳ್ಳಿಯಲ್ಲಿ ಕಾಲೇಜಿನ ಲೋಕಾರ್ಪಣೆ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕೆಎಲ್‌ಇಯಿಂದ 320 ಸಂಸ್ಥೆಗಳನ್ನು ನಡೆಸಲಾಗುತ್ತಿದೆ. 18 ಸಾವಿರ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಸಂಸ್ಥೆಯಿಂದ ಆರೋಗ್ಯ ಸೇವೆಯನ್ನೂ ನೀಡಲಾಗುತ್ತಿದೆ ಎಂದರು.
1,200 ಹಾಸಿಗೆಗಳ ಪೈಕಿ 300 ಹಾಸಿಗೆಗಳನ್ನು ಬಡವರಿಗಾಗಿ ಮೀಸಲಿಡಲಾಗಿದೆ. ಅಗ್ರಿಕಲ್ಚರ್ ಹಾಗೂ ಹಾರ್ಟಿಕಲ್ಚರ್ ಕಾಲೇಜುಗಳನ್ನು ಆರಂಭಿಸಲಾಗಿದೆ. ಅಲ್ಲದೇ, ಶೀಘ್ರದಲ್ಲೇ ಧಾರವಾಡದಲ್ಲಿಯೂ ವಿಶೇಷ ಯೋಜನೆ ಕಾರ್ಯಾರಂಭ ಮಾಡಲಿದೆ ಎಂದು ಅವರು ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/09/2026 05:25 pm
LOADING...