ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಕೆ.ಎಲ್.ಇ ಆಸ್ಪತ್ರೆ ಉದ್ಘಾಟನೆ ಕ್ಷಣಗಣನೆ ! ವಂದೇ ಮಾತರಂ, ರಾಷ್ಟ್ರಗೀತೆ ಮೂಲಕ ಚಾಲನೆ

ಹುಬ್ಬಳ್ಳಿ : ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಇಂದು ಉದ್ಘಾಟನೆಯಾಗಲಿರುವ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರ ಮಠದ ಕೆ.ಎಲ್.ಇ ಕಾಲೇಜು ಉದ್ಘಾಟನೆಗೆ ಜನಸಾಗರವೇ ಹರಿದು ಬಂದಿದೆ.

ಈಗಾಗಲೇ ವೇದಿಕೆ ಮೇಲಿನ ಆಸನಗಳು ಸಂಪೂರ್ಣ ಗಣ್ಯರಿಂದ ತುಂಬಿದ್ದು, ವಿವಿಧ ಕ್ಷೇತ್ರಗಳ ಮುಖ್ಯಸ್ಥರು, ಅಧ್ಯಕ್ಷರು, ವ್ಯವಸ್ಥಾಪಕರು ಹಾಗೂ ಆಡಳಿತ ಮಂಡಳಿ ಸೇರಿದಂತೆ ಹಳ್ಳಿಗಳಿಂದ ಆಗಮಿಸಿದ ಜನಸಮೂಹ ವೇದಿಕೆಯ ಮುಂದೆ ಆಸ್ಪತ್ರೆ ಉದ್ಘಾಟನೆ ಕ್ಷಣ ಕಣ್ತುಂಬಿಕೊಳ್ಳಲು ಕಾತರದಿಂದ ಕಾದಿದೆ.

ಸದ್ಯ ಅಲಂಕೃತ ವೇದಿಕೆಯಲ್ಲಿ ಕೇಂದ್ರದ ಸಚಿವರು ಹಾಗೂ ಉದ್ಘಾಟನೆಗೆ ಆಗಮಿಸಿದ ವಿವಿಧ ಗಣ್ಯರು ಉಪಸ್ಥಿತರಿದ್ದು, ವಂದೇ ಮಾತರಂ ಮತ್ತು ರಾಷ್ಟ್ರಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಬೃಹತ್ ವೇದಿಕೆಯ ಮುಂದೆ ಜನಸಾಗರವೇ ನೆರೆದಿದ್ದು, ಕಾರ್ಯಕ್ರಮಕ್ಕೆ ಜನರ ಆಗಮನ ನಿರಂತರವಾಗಿದೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/09/2026 05:50 pm

Cinque Terre

10.14 K

Cinque Terre

1

ಸಂಬಂಧಿತ ಸುದ್ದಿ