ನವಲಗುಂದ: ಪಟ್ಟಣದ ವಿನಾಯಕ ಪೇಟೆಯಲ್ಲಿ ಇರುವ ಐತಿಹಾಸಿಕ ಗಣಪತಿ ದೇವಸ್ಥಾನದಲ್ಲಿ ವೈಶಿಷ್ಟ್ಯ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಒಂಬತ್ತು ದಿನಗಳ ಕಾಲ ಪಂಚಲೋಹದ ಗಣೇಶ ಮೂರ್ತಿಯ ವಾಹನೋತ್ಸವದ ಜರುಗುವುದು.
ದಿನದಿಂದ ದಿನಕ್ಕೆ ವಾಹನದಲ್ಲಿ ಪಾಲ್ಗೊಳ್ಳುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ವಾಹನೋತ್ಸವದ ಆರನೇ ದಿನವಾದ ಇಂದು ಗಂಡಭೇರುಂಡ ವಾಹನ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ದೇವಸ್ಥಾನದಿಂದ ಗಾಂಧಿ ಮಾರುಕಟ್ಟೆಯ ಪರ್ವತ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಹಿಂದಿನ ಕಾಲದಂತೆ ಪಂಜಿನ ಬೆಳಕು ಮೂಲಕ, ನಗರದ ಗುರು ಹಿರಿಯರು ಯುವಕರು ಅಲ್ಲದೇ ಮಹಿಳೆಯರು ಆರತಿ ಹಿಡಿದು ಭಾಗವಹಿಸಿದರು.
Kshetra Samachara
19/09/2026 08:45 pm
LOADING...