ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಡಿ. ಜೆ ಸೌಂಡ್‌ಗೆ ಪುಟ್ಟ ಮಗು ಅಸ್ವಸ್ಥ ; ಮಧ್ಯರಾತ್ರಿ ಡಿಸಿ ನಿವಾಸದ ಮುಂದೆ ತಂದೆಯ ಪ್ರತಿಭಟನೆ!

ರಾಯಚೂರು: ನಗರದಲ್ಲಿ ಡಿ.ಜೆ. ಸೌಂಡ್‌ನ ಅಧಿಕ ಶಬ್ದದಿಂದ ತನ್ನ ಪುಟ್ಟ ಮಗು ಅಸ್ವಸ್ಥಗೊಂಡಿದೆ ಎಂದು ಆರೋಪಿಸಿ, ಕಣ್ಣೀರು ಹಾಕಿದ ಮಗುವಿನ ತಂದೆಯೊಬ್ಬರು ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಬಳಿ ತಡರಾತ್ರಿ ಪ್ರತಿಭಟನೆಗೆ ಮುಂದಾದ ಘಟನೆ ನಡೆದಿದೆ.

ಜಿಲ್ಲೆಯಲ್ಲಿ ಡಿ. ಜೆ. ಬಳಿಕ ನಿಷೇಧ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣದ ಕಠಿಣ ಆದೇಶವಿದ್ದರೂ ಅದು ಕಾಗದದಲ್ಲಷ್ಟೇ ಉಳಿದಿದೆ. ಇದರಿಂದಾಗಿ ಹಿರಿಯರು, ಮಕ್ಕಳು ಹಾಗೂ ರೋಗಿಗಳ ಆರೋಗ್ಯಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಆ ತಂದೆ, ಮಧ್ಯರಾತ್ರಿಯೇ ಡಿಸಿ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಮುಂದಾದರು.

ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, "ಈಗ ರಾತ್ರಿ ವೇಳೆ ಪ್ರತಿಭಟನೆ ಮಾಡುವುದು ಸರಿಯಲ್ಲ, ಮುಂಜಾನೆ ಬಂದು ಮಾತನಾಡೋಣ" ಎಂದು ಸಮಾಧಾನಪಡಿಸಲು ಯತ್ನಿಸಿದರು. ಆದರೆ ಇದಕ್ಕೆ ಒಪ್ಪದ ತಂದೆ, "ನನ್ನ ಮಗಳ ವಿಚಾರದಲ್ಲಿ ನಾನು ಸುಮ್ಮನಿರುವುದಿಲ್ಲ. ನನ್ನ ಮಗಳ ಪ್ರಾಣವೇ ನನಗೆ ದೊಡ್ಡದು" ಎಂದು ಪಟ್ಟುಹಿಡಿದು ಪ್ರತಿಭಟನೆ ಮುಂದುವರಿಸಲು ಮುಂದಾದರು. ಈ ವೇಳೆ ಪೊಲೀಸರು ಹಾಗೂ ಸಂತ್ರಸ್ತ ತಂದೆಯ ನಡುವೆ ಮಾತಿನ ಚಕಮಕಿ ನಡೆಯಿತು.

Edited By :
PublicNext

PublicNext

19/09/2026 10:40 pm

Cinque Terre

7.94 K

Cinque Terre

2

ಸಂಬಂಧಿತ ಸುದ್ದಿ