ಬೆಂಗಳೂರು:
"10 ಲಕ್ಷ ರೂಪಾಯಿ ನೀಡಿದರೆ 1 ಕೋಟಿ ರೂಪಾಯಿ ಕೊಡುತ್ತೇವೆ" ಎಂದು ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಕುರಿತು ಮಾಹಿತಿ ನೀಡಿದ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್, "ಮುಖ್ಯ ಆರೋಪಿ ಶಶಿಕುಮಾರ್ ಸಾರ್ವಜನಿಕರಿಗೆ ಭಾರೀ ಹಣದ ಆಮಿಷ ಒಡ್ಡಿ ವಂಚಿಸಿದ್ದಾನೆ. ಕೊಟ್ಟ ಹಣವನ್ನು ವಾಪಸ್ ಕೇಳಲು ಹೋದ ಸಂತ್ರಸ್ತರಿಗೆ ಬೌನ್ಸರ್‌ಗಳನ್ನು ಬಿಟ್ಟು ಬೆದರಿಕೆ ಹಾಕಿಸುತ್ತಿದ್ದ. ಅಷ್ಟೇ ಅಲ್ಲದೆ, ಕೆಲ ದಲಿತ ಸಂಘಟನೆಗಳ ಮುಖಂಡರಿಗೆ ಹಣದ ಆಮಿಷ ಒಡ್ಡಿ, ಅವರಿಂದಲೂ ಸಂತ್ರಸ್ತರಿಗೆ ಹಾಗೂ ಪೊಲೀಸರಿಗೆ ಧಮ್ಕಿ ಹಾಕಿಸುತ್ತಿದ್ದ" ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ದಲಿತ ಮುಖಂಡ ನಾಗೇಶ್ ಎಂಬಾತನನ್ನೂ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಸಾರ್ವಜನಿಕರನ್ನು ವಂಚಿಸಿ ಗಳಿಸಿದ ಹಣದಲ್ಲಿ ಆರೋಪಿಗಳು ದುಬಾರಿ ವಾಹನಗಳು ಹಾಗೂ ಜಮೀನುಗಳನ್ನು ಖರೀದಿಸಿದ್ದು, ಸದ್ಯ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
PublicNext
20/09/2026 08:49 am
LOADING...