ಚಾಮರಾಜನಗರ : ತಾಲೂಕಿನ ಬಡಗಲಪುರ ಗ್ರಾಮದಲ್ಲಿ ರೈತ ಬಸವಣ್ಣ ಅವರನ್ನು ಬಲಿ ಪಡೆದಿದ್ದ ನರಭಕ್ಷಕ ಹುಲಿಯ ಸೆರೆಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಇದಕ್ಕಾಗಿ ದುಬಾರೆ ಆನೆ ಶಿಬಿರದಿಂದ ಪರಿಣಿತ ‘ಗಜಪಡೆ’ ಹುಲಿ ಸೆರೆ ಕಾರ್ಯಾಚರಣೆಗೆ ಇಳಿದಿದೆ.
ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಅಗಾಧ ಅನುಭವ ಹೊಂದಿರುವ ಪ್ರಸಿದ್ಧ ಕುಮ್ಕಿ ಆನೆಗಳಾದ ‘ಕಂಜನ್’ ಹಾಗೂ ‘ಈಶ್ವರ’ ಬಡಗಲಪುರಕ್ಕೆ ಆಗಮಿಸಿದ್ದು, ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿಯೊಂದಿಗೆ ಬೆಳಗ್ಗೆಯಿಂದಲೇ ಜಂಟಿ ಕೂಂಬಿಂಗ್ ಆರಂಭಿಸಿವೆ.
ಹಲವು ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿದ ಅನುಭವ ಹೊಂದಿರುವ ಕುಮ್ಕಿ ಆನೆಗಳ ನೆರವಿನಿಂದ ಬಡಗಲಪುರ ಮತ್ತು ಸುತ್ತಮುತ್ತಲಿನ ಅರಣ್ಯ ಅಂಚಿನ ಪ್ರದೇಶಗಳಲ್ಲಿ ಹುಲಿಯ ಸುಳಿವಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಇನ್ನು ಆನೆಗಳ ಜತೆ ಶ್ವಾನ ದಳವನ್ನೂ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಬಳಸಿಕೊಂಡಿದೆ.
PublicNext
20/09/2026 11:55 am
LOADING...