ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ : ಜಿಲ್ಲೆಯಲ್ಲಿ ವರುಣನ ಆರ್ಭಟ ; ಹನೂರಿನಲ್ಲಿ 117 ಮಿ.ಮೀ. ದಾಖಲೆ ಮಳೆ

ಚಾಮರಾಜನಗರ : ಜಿಲ್ಲೆಯಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು, ಹನೂರು ತಾಲೂಕಿನ ವಿವಿಧೆಡೆ 117 ಮಿ.ಮೀ. ಮಳೆಯಾಗುವ ಮೂಲಕ ಕರ್ನಾಟಕದಲ್ಲೇ ಅತಿ ಹೆಚ್ಚು ಮಳೆ ದಾಖಲಾಗಿದೆ.

ಜಿಲ್ಲೆಯ ವಿವಿಧ ಮಳೆ ಮಾಪನ ಕೇಂದ್ರಗಳಲ್ಲಿ ಸೆಪ್ಟೆಂಬರ್ 16ರ ಬೆಳಗ್ಗೆ 8.30ರಿಂದ ಸೆಪ್ಟೆಂಬರ್ 17ರ ಬೆಳಗ್ಗೆ 8.30ರವರೆಗೆ ದಾಖಲಾದ ಮಳೆ ಪ್ರಮಾಣದ ಪ್ರಕಾರ, ಹನೂರು ಕೇಂದ್ರದಲ್ಲಿ 117 ಮಿ.ಮೀ., ಹನೂರು ಪಟ್ಟಣದಲ್ಲಿ 106.5 ಮಿ.ಮೀ., ಹನೂರು ಶೆಟ್ಟಳ್ಳಿಯಲ್ಲಿ 81 ಮಿ.ಮೀ. ಮಳೆ ದಾಖಲಾಗಿದೆ. ಇನ್ನು ಮಾರ್ಟಳ್ಳಿಯಲ್ಲಿ 69.5 ಮಿ.ಮೀ., ರಾಮಾಪುರದಲ್ಲಿ 69 ಮಿ.ಮೀ., ಕೌದಳ್ಳಿಯಲ್ಲಿ 61 ಮಿ.ಮೀ., ಬಂಡಳ್ಳಿಯಲ್ಲಿ 61 ಮಿ.ಮೀ., ದೊಡ್ಡಲತ್ತೂರಿನಲ್ಲಿ 52 ಮಿ.ಮೀ., ಮಣಗಳ್ಳಿಯಲ್ಲಿ 47.5 ಮಿ.ಮೀ. ಹಾಗೂ ಅಜ್ಜಿಪುರದಲ್ಲಿ 43.20 ಮಿ.ಮೀ. ಮಳೆಯಾಗಿದೆ.

ಕೊಳ್ಳೇಗಾಲ ತಾಲ್ಲೂಕಿನ ಕುರಟ್ಟಿ ಹೊಸೂರಿನಲ್ಲಿ 67.5 ಮಿ.ಮೀ., ಚಿಕ್ಕಮಾಲಾಪುರದಲ್ಲಿ 53 ಮಿ.ಮೀ., ಪಾಳ್ಯದಲ್ಲಿ 49.5 ಮಿ.ಮೀ., ಸಿಂಗನಲ್ಲೂರಿನಲ್ಲಿ 48 ಮಿ.ಮೀ. ಹಾಗೂ ದೊಡ್ಡಿಂದುವಾಡಿಯಲ್ಲಿ 35.5 ಮಿ.ಮೀ. ಮಳೆ ದಾಖಲಾಗಿದೆ.

ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ 37 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆರೆ, ಕಟ್ಟೆ, ಹಳ್ಳ-ಕೊಳ್ಳಗಳಿಗೆ ನೀರಿನ ಹರಿವು ಹೆಚ್ಚಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.

Edited By : PublicNext Desk
PublicNext

PublicNext

18/09/2026 11:04 am

Cinque Terre

2.82 K

Cinque Terre

0

ಸಂಬಂಧಿತ ಸುದ್ದಿ