ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೌಷ್ಟಿಕಾಂಶಗಳ ಸ್ವಾಸ್ಥ್ಯ ಮತ್ತು ಶುಚಿತ್ವ ನಿರ್ವಹಣೆಗೆ ಆದ್ಯತೆ : ಇದು ಮಕ್ಕಳ ಸಂಭ್ರಮ ಶನಿವಾರ

ರಾಯಬಾಗ: ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಪಿಎಂ ಶ್ರೀ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಇಂದು ಸಂಭ್ರಮ ಶನಿವಾರ ಕಾರ್ಯಕ್ರಮದ ಪ್ರಯುಕ್ತ ಪೌಷ್ಟಿಕಾಂಶಗಳ ಸ್ವಾಸ್ಥ್ಯ ಮತ್ತು ಶುಚಿತ್ವ ನಿರ್ವಹಣೆಗೆ ಆದ್ಯತೆ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮಕ್ಕಳು ತಾವುಗಳೆಲ್ಲ ಮನೆಯಿಂದ ತಂದ ತರಕಾರಿ, ಹಣ್ಣು, ಮೊಸರು ಹಾಗೂ ಧಾನ್ಯಗಳನ್ನು ಸೇರಿಸಿ ಅಂದವಾದ ಚಿತ್ರಗಳನ್ನು ಬಿಡಿಸಿದ್ದರು. ಇವುಗಳನ್ನು ನೋಡುವುದರಿಂದ ಮನಸ್ಸಿಗೆ ಮನರಂಜನೆ ಹಾಗೂ ಪೌಷ್ಟಿಕಾಂಶಗಳ ಸ್ವಾಸ್ಥ್ಯ ಮತ್ತು ಶುಚಿತ್ವ ನಿರ್ವಹಣೆಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕೆನ್ನುವುದರ ಬಗ್ಗೆ ಮಕ್ಕಳಿಗೆ ಶಾಲೆಯ ಶಿಕ್ಷಕಿಯರು ತಿಳಿಸಿಕೊಟ್ಟರು. ಮಕ್ಕಳು ಸಹ ತಾವು ಈ ವಿಷಯವಾಗಿ ಪುಟ್ಟ ಪುಟ್ಟ ಭಾಷಣ ಮಾಡಿ ಶಾಲೆಯ ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸಿದರು. ಈ ವೇಳೆ ಶಾಲೆಯ ಪ್ರಧಾನ ಗುರುಗಳಾದ ವಿ. ಬಿ. ಗಸ್ತಿ ಹಾಗೂ ಎಲ್ಲಾ ಸಹ ಶಿಕ್ಷಕ, ಶಿಕ್ಷಕಿಯರು, ಅತಿಥಿ ಮತ್ತು ಪಿಎಂ ಶ್ರೀ ಶಿಕ್ಷಕ, ಶಿಕ್ಷಕಿಯರು ಮುದ್ದು ವಿದ್ಯಾರ್ಥಿಗಳು ಹಾಜರಿದ್ದರು.

ವರದಿ: ಚಿದಾನಂದ ಐಹೊಳೆ ಪಬ್ಲಿಕ್ ನೆಕ್ಸ್ಟ್ ರಾಯಬಾಗ

Edited By :
PublicNext

PublicNext

20/09/2026 12:17 pm

Cinque Terre

2.97 K

Cinque Terre

0

ಸಂಬಂಧಿತ ಸುದ್ದಿ