ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖಾನಾಪುರ: ಮನವಿ ಕೊಟ್ಟರೂ ಉತ್ತರ ಇಲ್ಲ, ಮತ್ತೆ ಭುಗಿಲೆದ್ದ ಜಮೀನು ವಿವಾದ

ವಾ. ಓ :ಖಾನಾಪುರ ತಾಲೂಕಿನ ಬೀಡಿ ಹೋಬಳಿಯ ಕೆರವಾಡ ಗ್ರಾಮದಲ್ಲಿ ಜಮೀನು ವಿವಾದ ಮತ್ತೆ ಭುಗಿಲೆದ್ದಿದೆ.ರಿ.ಸ. ನಂ. 123ರ ಜಮೀನಿನಲ್ಲಿರುವ ಬಸವೇಶ್ವರ ಗುಡಿಯ ಕೀಲಿ ಹಾಗೂ ಬಾಗಿಲು ಒಡೆಯಲು ಕೆಲವರು ಕಲ್ಲು ಬಳಸಿ ಯತ್ನಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವಾ. ಓ :ಈ ವೇಳೆ ಸ್ಥಳೀಯರು ಹಾಗೂ ಆರೋಪಿತರ ನಡುವೆ ಮಾತಿನ ಚಕಮಕಿ ನಡೆದಿದ್ದು, ವೃದ್ಧೆಯೊಬ್ಬರನ್ನು ದೂಡಿರುವ ಆರೋಪವೂ ಕೇಳಿಬಂದಿದೆ.ಪರಿಸ್ಥಿತಿ ಬಿಗಡಾಯಿಸುವ ಮುನ್ನ ಗ್ರಾಮಸ್ಥರು 112ಕ್ಕೆ ಕರೆ ಮಾಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಬಂಧಪಟ್ಟವರನ್ನು ಠಾಣೆಗೆ ಬರುವಂತೆ ಸೂಚಿಸಿದ್ದಾರೆ.

ವಾ. ಓ :ಇನ್ನು ಈ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್, ಎಸಿ ಹಾಗೂ ಡಿಸಿಗೆ ಮನವಿ ಸಲ್ಲಿಸಿದ್ದರೂ ಈವರೆಗೆ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಜೊತೆಗೆ, ರುದ್ರಪ್ಪ ಲಿಂಗಪ್ಪ ಅವಕನ್ನವರ ಎಂಬವರಿಗೆ ಸುಮಾರು 19 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎನ್ನಲಾಗುತ್ತಿದ್ದು, ಇದರ ದಾಖಲೆ ಹಾಗೂ ಮಂಜೂರಾತಿ ಪ್ರಕ್ರಿಯೆ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಾ. ಓ :ಸರ್ವೆ ನಂಬರ್ 123ರ ಮಾಲೀಕತ್ವ, ಮಂಜೂರಾತಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಕಾನೂನುಬದ್ಧವಾಗಿ ಸಮಸ್ಯೆ ಬಗೆಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಬಾಳೇಶ ಚವ್ವನ್ನವರ

ಪಬ್ಲಿಕ್ ನೆಕ್ಸ್ಟ್ ಖಾನಾಪುರ

Edited By :
PublicNext

PublicNext

20/09/2026 09:28 am

Cinque Terre

4.96 K

Cinque Terre

0

ಸಂಬಂಧಿತ ಸುದ್ದಿ