ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸಿದ್ಧಾರ್ಥ್ ಟ್ರಸ್ಟ್‌ನಲ್ಲಿ ಅವ್ಯವಹಾರ ಜಗಜಾಹೀರು ಆಗಿದೆ‌ ಎಂದ ಆರ್. ಅಶೋಕ

ಬೆಳಗಾವಿ: ಖರ್ಗೆ ಒಡೆತನದ ಸಿದ್ಧಾರ್ಥ್ ಟ್ರಸ್ಟ್ ಕೇಸ್ ರಿ ಓಪನ್ ವಿಚಾರಕ್ಕೆ ವಿಪಕ್ಷ ನಾಯಕ ಆರ್. ಅಶೋಕ ಪ್ರತಿಕ್ರಿಯೆ ನೀಡಿದ ಅವರು, ಯಾರು ತಪ್ಪು ಮಾಡಿದ್ದಾರೆ ಅವರು ಶಿಕ್ಷೆ ಅನುಭವಿಸಲೇಬೇಕು ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಾಗಲೇ ಸಿದ್ಧಾರ್ಥ್ ಟ್ರಸ್ಟ್‌ನಲ್ಲಿ ಅವ್ಯವಹಾರ ಆಗಿರೋದು ಜಗಜಾಹೀರು ಆಗಿದೆ. ಛಲುವಾದಿ ನಾರಾಯಣಸ್ವಾಮಿ ಅವರು ಪ್ರಕರಣದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಕೋರ್ಟ್‌ನಲ್ಲಿ ತೀರ್ಮಾನ ಆಗಬೇಕಿದೆ, ನ್ಯಾಯ ಸಿಗುತ್ತದೆ. ಅದು ಸರ್ಕಾರಿ ಜಮೀನು ಅವ್ಯವಹಾರ ಆಗಿದೆ, ಉಳಿಯಬೇಕು. ಗ್ಯಾರೆಂಟಿ ತಪ್ಪಾಗಿದೆ, ಕೋರ್ಟ್‌ನಲ್ಲಿ ನಮಗೆ ನ್ಯಾಯ ಸಿಗುತ್ತದೆ. ಈ ವಿಚಾರದ ಬಗ್ಗೆ ಹೋರಾಟ ಮಾಡುತ್ತೇವೆ ಎಂದು ಆರ್. ಅಶೋಕ ತಿಳಿಸಿದರು.

Edited By :
PublicNext

PublicNext

20/09/2026 11:31 am

Cinque Terre

2.79 K

Cinque Terre

0

ಸಂಬಂಧಿತ ಸುದ್ದಿ