ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಣ್ಮನ ಸೆಳೆದ ಶ್ರೀ ವೆಂಕಟೇಶ್ವರ ಕಮಿಟಿಯ ಗಜಾನನೋತ್ಸವ

ರಾಯಬಾಗ : ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಗೌಲತ್ತಿನವರ ಸಮಾಜದ ಶ್ರೀ ವೆಂಕಟೇಶ್ವರ ಗಜಾನನ ಕಮಿಟಿಯ ಗಜಾನನೋತ್ಸವವು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ನೆರವೇರಿತು.

ರಂಗು-ರಂಗಿನ ಉಡುಗೆ-ತೊಡುಗೆಗಳನ್ನು ತೊಟ್ಟ ಮಹಿಳೆಯರು ಹಾಗೂ ಕಿಶೋರಿಯರ ನೃತ್ಯ ನಯನ ಮನೋಹರವಾಗಿತ್ತು. ಪಟಾಕಿ ಸಿಡಿಸುತ್ತಾ, ಪರಸ್ಪರ ಗುಲಾಲು ಎರಚುತ್ತಾ, ವಿಘ್ನ ವಿನಾಶಕ ಗಣೇಶನಿಗೆ ಜಯಘೋಷ ಕೂಗುತ್ತಾ ಭಕ್ತರು ಸಂಭ್ರಮಿಸಿದರು. ಭಕ್ತಿಪರವಶರಾಗಿ ಮೈಮರೆತು ಸಂಗೀತಕ್ಕೆ ತಕ್ಕ ಹೆಜ್ಜೆ ಹಾಕುತ್ತಾ ಸಂತೋಷದಿಂದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಕಲ ಸದ್ಭಕ್ತರಲ್ಲಿ ದೈವೀ ಭಾವನೆ ತುಂಬಿ ತುಳುಕುತ್ತಿತ್ತು.

ಕೈಮುಗಿದು ಬೇಡುವ ಭಕ್ತರಿಗೆ ದಯಾಸಿಂಧುವಾಗಿರುವ ಗಣಪತಿ ಸರ್ವರಿಗೂ ಸನ್ಮಂಗಲವನ್ನುಂಟು ಮಾಡಲಿ ಎಂದು ಭಕ್ತರು ಪ್ರಾರ್ಥಿಸಿದರು.

ವರದಿ: ಚಿದಾನಂದ ಐಹೊಳೆ, ಪಬ್ಲಿಕ್ ನೆಕ್ಸ್ಟ್, ರಾಯಬಾಗ

Edited By :
PublicNext

PublicNext

20/09/2026 01:47 pm

Cinque Terre

2.13 K

Cinque Terre

0

ಸಂಬಂಧಿತ ಸುದ್ದಿ