ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೂಗಲ್ ಪೇ, ಫೋನ್‌ಪೇ ಬಳಕೆದಾರರೇ ಗಮನಿಸಿ! ಯುಪಿಐ ಶುಲ್ಕದ ಬಗ್ಗೆ ಹೊಸ ಅಪ್‌ಡೇಟ್

ನವದೆಹಲಿ : ದೈನಂದಿನ ಡಿಜಿಟಲ್ ವಹಿವಾಟಿಗೆ ಜೀವನಾಡಿಯಾಗಿರುವ ಯುಪಿಐ (UPI) ಬಳಕೆದಾರರು ಹಾಗೂ ವ್ಯಾಪಾರಿಗಳಿಗೆ ಮಹತ್ವದ ಬದಲಾವಣೆಯೊಂದು ಎದುರಾಗಲಿದೆ. ಆಯ್ದ ವ್ಯಕ್ತಿಯಿಂದ ವ್ಯಾಪಾರಿಗೆ ನಡೆಯುವ ಯುಪಿಐ ವಹಿವಾಟುಗಳ ಮೇಲೆ ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR) ಶುಲ್ಕವನ್ನು ವಿಧಿಸಲು ಯುಪಿಐ ಮತ್ತು ಸೇವೆಗಳ ಚಾಲನಾ ಸಮಿತಿ ನಿರ್ಧರಿಸಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ತನ್ನ ಅಧಿಕೃತ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಪ್ರಸ್ತುತ ಹಬ್ಬದ ಸಂಭ್ರಮ ಹಾಗೂ ವ್ಯಾಪಾರ ವಹಿವಾಟುಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ದೀಪಾವಳಿಯ ನಂತರ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಶುಲ್ಕ ವಿಧಿಸುವ ನಿಖರವಾದ ದಿನಾಂಕವನ್ನು ಶೀಘ್ರದಲ್ಲೇ ಪ್ರತ್ಯೇಕವಾಗಿ ಪ್ರಕಟಿಸಲಾಗುವುದು ಎಂದು ಎನ್‌ಪಿಸಿಐ ಸ್ಪಷ್ಟಪಡಿಸಿದೆ.

ಏನಿದು MDR ಶುಲ್ಕ? ಯಾರಿಗೆ ಅನ್ವಯ?

ಡಿಜಿಟಲ್ ಪಾವತಿ ಸೇವೆಗಳನ್ನು ಒದಗಿಸಲು ಮತ್ತು ಪ್ರಕ್ರಿಯೆಗೊಳಿಸಲು ವ್ಯಾಪಾರಿಗಳಿಂದ ಸಂಗ್ರಹಿಸುವ ಸೇವಾ ಶುಲ್ಕವೇ ಈ ಎಂಡಿಆರ್ (MDR - Merchant Discount Rate). ಪ್ರಸ್ತಾವಿತ ನಿಯಮವು ಸಾಮಾನ್ಯ ಗ್ರಾಹಕರಿಂದ ಗ್ರಾಹಕರಿಗೆ (P2P) ನಡೆಯುವ ವರ್ಗಾವಣೆಗೆ ಅನ್ವಯಿಸುವುದಿಲ್ಲ. ಬದಲಾಗಿ, ಕೇವಲ ಆಯ್ದ ವ್ಯಾಪಾರಿ ವಹಿವಾಟುಗಳಿಗೆ (P2M) ಮಾತ್ರ ಅನ್ವಯವಾಗಲಿದೆ.

ಆದಾಗ್ಯೂ, ಈ ಶುಲ್ಕ ವ್ಯಾಪ್ತಿಗೆ ಯಾವ ನಿರ್ದಿಷ್ಟ ವ್ಯಾಪಾರ ವರ್ಗಗಳು ಒಳಪಡಲಿವೆ ಹಾಗೂ ಶುಲ್ಕದ ಪ್ರಮಾಣ ಎಷ್ಟಿರಲಿದೆ ಎಂಬ ವಿವರಗಳನ್ನು ಎನ್‌ಪಿಸಿಐ ಸದ್ಯಕ್ಕೆ ಬಹಿರಂಗಪಡಿಸಿಲ್ಲ.

Edited By : Nirmala Aralikatti
PublicNext

PublicNext

13/10/2026 05:00 pm

Cinque Terre

19.18 K

Cinque Terre

0

ಸಂಬಂಧಿತ ಸುದ್ದಿ