ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ತೀವ್ರ ನಿಗಾ ಘಟಕದಲ್ಲಿದ್ದ ರಾಮ್ ತೇಜ ರೆಡ್ಡಿ ಸಾವು : ಮತ್ತೋರ್ವ ಗಾಯಾಳು ಆದಿತ್ಯ ಸ್ಥಿತಿ ಗಂಭೀರ

ದಾವಣಗೆರೆ : ಬಾಡ ಕ್ರಾಸ್ ಬಳಿ ಸಂಭವಿಸಿದ ಭೀಕರ ಕಾರು ಅಪಘಾತ ಪ್ರಕರಣದಲ್ಲಿ, ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ಗಾಯಾಳು ಬಾಲಕ ಕೂಡ ಮೃತಪಟ್ಟಿದ್ದಾನೆ.

ಮೃತರನ್ನು 17 ವರ್ಷದ ರಾಮ್ ತೇಜ ರೆಡ್ಡಿ ಎಂದು ಗುರುತಿಸಲಾಗಿದೆ. ಈ ದುರ್ಘಟನೆಯಲ್ಲಿ ಈಗಾಗಲೇ ಕಾರಿನಲ್ಲಿದ್ದ ಸೃಜನ್ ಎಂಬ ಅಪ್ರಾಪ್ತ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದನು. ಇದೀಗ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಮ್ ತೇಜ ರೆಡ್ಡಿ ಕೂಡ ಸಾವನ್ನಪ್ಪಿರುವುದು ಸ್ಥಳೀಯವಾಗಿ ತೀವ್ರ ಶೋಕ ಸೃಷ್ಟಿಸಿದೆ.

ದಾವಣಗೆರೆಯ ಬಾಡ ಕ್ರಾಸ್ ಬಳಿ ಸಿಎನ್‌ಜಿ (CNG) ಸಿಲಿಂಡರ್ ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಕಾರೊಂದು ಹಿಂಬದಿಯಿಂದ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದಿತ್ತು. ಪರಿಣಾಮ, ಕಾರಿನಲ್ಲಿದ್ದ ಮೂವರು ಅಪ್ರಾಪ್ತ ಬಾಲಕರು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದ ತೀವ್ರತೆಗೆ ಸೃಜನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ರಾಮ್ ತೇಜ ರೆಡ್ಡಿ ಹಾಗೂ ಆದಿತ್ಯ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಾಮ್ ತೇಜ ರೆಡ್ಡಿ ಇಂದು ಸಾವನ್ನಪ್ಪಿದ್ದಾರೆ. ಮತ್ತೋರ್ವ ಗಾಯಾಳು ಆದಿತ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ ನೀಡಲಾಗುತ್ತಿದೆ.

Edited By :
PublicNext

PublicNext

17/10/2026 01:32 pm

Cinque Terre

6.23 K

Cinque Terre

0

ಸಂಬಂಧಿತ ಸುದ್ದಿ