ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಉತ್ತರಾಖಂಡ ಹೆಲಿಕಾಪ್ಟರ್ ದುರಂತ, ತ್ಯಾವಣಿಗೆ ಮೂಲದ ವಕೀಲ ಸುಧೀರ್ ಬಲಿ...

ದಾವಣಗೆರೆ : ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಐದು ಜನರು ಮೃತಪಟ್ಟಿದ್ದು, ಮೃತರ ಪೈಕಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತ್ಯಾವಣಿಗೆ ಗ್ರಾಮದ ಸುಧೀರ್ (49) ಎಂಬುವವರ ತನಿಖೆಯಿಂದ ತಿಳಿದುಬಂದಿದೆ.

ವೃತ್ತಿಯಲ್ಲಿ ವಕೀಲರಾಗಿದ್ದ ಸುಧೀರ್ ಅವರು ತಮ್ಮ ಇಡೀ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಕೇವಲ ಹಬ್ಬ-ಹರಿದಿನಗಳು ಹಾಗೂ ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ಮಾತ್ರ ಸ್ವಗ್ರಾಮವಾದ ತ್ಯಾವಣಿಗೆಗೆ ಬಂದು ಹೋಗುತ್ತಿದ್ದರು. ಇತ್ತೀಚೆಗಷ್ಟೇ ನಡೆದ ಮಹಾಲಯ ಅಮವಾಸ್ಯೆಯ ನಿಮಿತ್ತ ಅವರು ತಮ್ಮ ಗ್ರಾಮಕ್ಕೆ ಭೇಟಿ ನೀಡಿ ಮರಳಿದ್ದರು.

ಸದ್ಯ ತ್ಯಾವಣಿಗೆ ಗ್ರಾಮದಲ್ಲಿ ಅವರ ಬಂಧು-ಮಿತ್ರರು ಮಾತ್ರ ವಾಸವಾಗಿದ್ದು, ಸುಧೀರ್ ಅವರ ಅಕಾಲಿಕ ಮರಣದ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮದಲ್ಲಿನ ಅವರ ಸಂಬಂಧಿಕರ ಮನೆಯಲ್ಲಿ ಶೋಕಸಾಗರ ಆವರಿಸಿದೆ. ಸುಧೀರ್ ಅವರ ಅಗಲಿಕೆಯಿಂದ ಸ್ವಗ್ರಾಮ ತ್ಯಾವಣಿಗೆಯಲ್ಲಿ ನೀರವ ಮೌನ ಆವರಿಸಿದೆ.

Edited By :
PublicNext

PublicNext

31/10/2026 05:35 pm

Cinque Terre

8.52 K

Cinque Terre

0

ಸಂಬಂಧಿತ ಸುದ್ದಿ