ವಿಜಯಪುರ: ಬೆಳಗ್ಗಿನ ವಾಯುವಿಹಾರಕ್ಕೆ ತೆರಳಿದ್ದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಭಾವಿಸಲಾಗಿತ್ತು. ಆದರೆ, ಪೊಲೀಸರ ತನಿಖೆ ವೇಳೆ ಇದು ಅಪಘಾತವಲ್ಲ, ವ್ಯವಸ್ಥಿತವಾಗಿ ನಡೆಸಿದ ಕೊಲೆ ಎಂಬ ಸ್ಫೋಟಕ ಸತ್ಯ ಬಯಲಾಗಿದೆ. ಅಷ್ಟೇ ಅಲ್ಲ, ಪತಿಯ ಸಾವಿಗೆ ನ್ಯಾಯ ಕೊಡಿಸುವಂತೆ ದೂರು ನೀಡಿದ್ದ ಪತ್ನಿಯೇ ಕೊಲೆಯ ಸಂಚಿನ ಪ್ರಮುಖ ಆರೋಪಿಯಾಗಿದ್ದಾಳೆ.
ವಿಜಯಪುರ ನಗರದ ಹೊರವಲಯದ ಚಿದಂಬರ ದೇವಸ್ಥಾನದ ರಸ್ತೆಯಲ್ಲಿ ಅಕ್ಟೋಬರ್ 4ರಂದು 42 ವರ್ಷದ ರಾಜಶೇಖರ ಬಿರಾದಾರ್ ಅವರ ಮೃತದೇಹ ಪತ್ತೆಯಾಗಿತ್ತು. ಬೆಳಗಿನ ಜಾವ ವಾಯುವಿಹಾರಕ್ಕೆ ತೆರಳಿದ್ದ ರಾಜಶೇಖರ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂದೇ ಆರಂಭದಲ್ಲಿ ಭಾವಿಸಲಾಗಿತ್ತು. ಈ ಸಂಬಂಧ ಮೃತನ ಪತ್ನಿ 30 ವರ್ಷದ ಅಶ್ವಿನಿ ಬಿರಾದಾರ್ ಕೂಡ ಪೊಲೀಸರಿಗೆ ದೂರು ನೀಡಿದ್ದಳು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಘಟನಾ ಸ್ಥಳದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನ ಹಾಗೂ ಬೈಕ್ ಸಂಚರಿಸಿರುವುದು ಕಂಡು ಬಂದಿತ್ತು. ಈ ಸುಳಿವು ಬೆನ್ನತ್ತಿದ ಪೊಲೀಸರು ಬೈಕ್‌ನಲ್ಲಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಇದು ಆಕಸ್ಮಿಕ ಅಪಘಾತವಲ್ಲ, ಪೂರ್ವಯೋಜಿತ ಕೊಲೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
BYTE 2: ಲಕ್ಷ್ಮಣ ನಿಂಬರಗಿ, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ರಾಜಶೇಖರ್ ಬಿರಾದಾರ್ ಹಾಗೂ ಅಶ್ವಿನಿ ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಆರು ವರ್ಷದ ಅವಳಿ ಗಂಡು ಮಕ್ಕಳಿದ್ದಾರೆ. ಕುಟುಂಬದಲ್ಲಿ ಆಗಾಗ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತಿದ್ದವು ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಸುಮಾರು ಏಳು ತಿಂಗಳ ಹಿಂದೆ ರಾಜಶೇಖರ್ ತಮ್ಮ ಮನೆಯೊಂದನ್ನು ನಿರ್ಮಿಸಿದ್ದರು. ಮನೆಯ ಪೇಂಟಿಂಗ್ ಕೆಲಸವನ್ನು ಆನಂದ ಕಲ್ಲೂರ ಎಂಬಾತನಿಗೆ ನೀಡಿದ್ದರು. ಕೆಲಸದ ನಿಮಿತ್ತ ಮನೆಗೆ ಬರುತ್ತಿದ್ದ ಆನಂದ್‌ಗೆ ಅಶ್ವಿನಿಯ ಪರಿಚಯವಾಗಿದ್ದು, ಕ್ರಮೇಣ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು ಎನ್ನಲಾಗಿದೆ.
ಮುಂದೆ ಪತಿಯಿಂದ ದೂರವಾಗಲು ಬಯಸಿದ್ದ ಅಶ್ವಿನಿ, ಪತಿಯನ್ನು ಕೊಲೆ ಮಾಡುವ ಬಗ್ಗೆ ಆನಂದ್‌ನೊಂದಿಗೆ ಚರ್ಚಿಸಿದ್ದಳು ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳು ಸೇರಿ ಕೊಲೆಗೆ ಸಂಚು ರೂಪಿಸಿ, ಕೃತ್ಯವನ್ನು ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೃತನ ಪತ್ನಿ ಅಶ್ವಿನಿ ಬಿರಾದಾರ್, ಆಕೆಯ ಪ್ರಿಯಕರ ಆನಂದ್ ಕಲ್ಲೂರ, 24 ವರ್ಷದ ಸಚಿನ್ ಬಡಳ್ಳಿ ಹಾಗೂ ಒಬ್ಬ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ.
BYTE 2: ಲಕ್ಷ್ಮಣ ನಿಂಬರಗಿ, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಸದ್ಯ ಪೊಲೀಸರ ತನಿಖೆಯಿಂದ ನಿಜಾಂಶ ಬಯಲಾಗಿದೆ. ಗಂಡನ ಕೊಲೆ ಮಾಡಿಸಿದ ಹೆಂಡತಿ ಹಾಗೂ ಆಕೆಯ ಪ್ರಿಯಕರ ಅಂದರ್ ಆಗಿದ್ದಾರೆ. ಯಾವುದೋ ಆಸೆಗೆ ಬಿದ್ದ ಅಶ್ವಿನಿ ಇಡೀ ಕುಟುಂಬವನ್ನೇ ಸಂಕಷ್ಟಕ್ಕೆ ದೂಡಿದ್ದಾಳೆ. ಇತ್ತ ತಂದೆ ಸಾವನ್ನಪ್ಪಿದ್ದು, ತಾಯಿ ಕಂಬಿ ಎಣಿಸುವಂತಾಗಿದ್ದು ಪುಟ್ಟ ಅವಳಿ ಮಕ್ಕಳು ಮಾತ್ರ ಅನಾಥವಾಗಿವೆ.
ಪಬ್ಲಿಕ್ ನೆಕ್ಸ್ಟ್, ವಿಜಯಪುರ
PublicNext
19/10/2026 11:26 pm