ಹಾಸನ : ಶ್ರವಣಬೆಳಗೊಳ ಜೈನ ಮಠದಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಮಾರ್ತಾಂಡ ಚಾವುಂಡರಾಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಿನ್ನೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಪ್ರಶಸ್ತಿ ಪ್ರದಾನ ಮಾಡಿದರು. ಇದೇ ವೇಳೆ ಮಾತನಾಡಿದ ಸ್ವಾಮೀಜಿಯವರು, ಹಾಸನ ಜಿಲ್ಲೆ ಸೇರಿದಂತೆ ಶ್ರವಣಬೆಳಗೊಳ ಕ್ಷೇತ್ರಕ್ಕೆ ದೇವೇಗೌಡರ ಕೊಡುಗೆ ಅಪಾರವಾಗಿದೆ. ಬರ ಮತ್ತು ಕ್ಷಾಮದಿಂದ ಬಳಲುತ್ತಿದ್ದ ಈ ಭಾಗದಲ್ಲಿ ಅವರ ಶ್ರಮದಿಂದ ಪ್ರತಿನಿತ್ಯ ಕುಡಿಯುವ ನೀರು ಸಿಗುವಂತಾಗಿದೆ. ನಮ್ಮ ಮಠಕ್ಕೂ ದೇವೇಗೌಡರಿಗೂ ಅವಿನಾಭಾವ ಸಂಬಂಧವಿದೆ. 84ರ ಹರೆಯದಲ್ಲೂ ಕಾಲ್ನಡಿಗೆಯಲ್ಲಿ ಮೆಟ್ಟಿಲುಗಳನ್ನು ಹತ್ತಿ ಮಹಾಮಸ್ತಕಾಭಿಷೇಕದ ವೇಳೆ ಬಾಹುಬಲಿಗೆ ನಮನ ಸಲ್ಲಿಸಿದ್ದರು. ಅವರಿಂದ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರು.
PublicNext
20/10/2026 08:00 am
LOADING...