ಹಾಸನ: ಹಾಸನಾಂಬ ಲಾಡು ಪ್ರಸಾದ ಮಾರಾಟ ವಿಚಾರ ಸಂಬಂಧ ಸಚಿವ ಶಿವಲಿಂಗೇಗೌಡ ಗರಂ ಆಗಿದ್ದಾರೆ. ಹೆಚ್ಚಿನ ದರಕ್ಕೆ ಲಾಡು ಮಾರಾಟಕ್ಕೆ ಸಚಿವ ಶಿವಲಿಂಗೇಗೌಡ ಕಿಡಿಕಾರಿದ್ದಾರೆ. 100 ರೂ.ಗೆ ಮಾರಾಟ ಮಾಡಲು ನಿರ್ಧರಿಸಿದ್ದ ಅಧಿಕಾರಿಗಳ ನಡೆಗೆ ಖಂಡಿಸಿದ್ದಾರೆ. ರೂ.60 ಕ್ಕೆ ಮಾರಾಟ ಮಾಡಲು ಖಡಕ್ ಸೂಚನೆ ಕೊಟ್ಟಿದ್ದಾರೆ. ಕೂಡಲೇ ದರ ಬದಲಾವಣೆ ಮಾಡುವಂತೆ ಸೂಚನೆ ಕೊಟ್ಟಿದ್ದು ಸಚಿವರ ಮಾತಿಗೆ ಒಪ್ಪಿ 60 ರೂ.ಗೆ ಲಾಡು ಮಾರಾಟಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ರೂ. 57ಕ್ಕೆ ಎರಡು ಲಾಡು ತಯಾರಿಕಾ ವೆಚ್ಚ ನೀಡಿರೋ ಜಿಲ್ಲಾಡಳಿತ ಇಸ್ಕಾನ್ ನಿಂದ ಲಾಡು ಪ್ರಸಾದ ತಯಾರು ಮಾಡುತ್ತಿದೆ.
PublicNext
30/10/2026 05:28 pm
LOADING...