ಕೋಲಾರ : ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿದ್ದ ಕಂಟೇನರ್ ಲಾರಿ ಪಲ್ಟಿ ಆಗಿದೆ. ಕೋಲಾರ ತಾಲೂಕಿನ ಕ್ಯಾಲನೂರು ಕ್ರಾಸ್ ಬಳಿ ಘಟನೆ ನಡೆದಿದೆ. ಲಾರಿಯಲ್ಲಿ ಅಕ್ರಮವಾಗಿ ಹಸುಗಳು ಸಾಗಣಿಕೆ ಮಾಡುತ್ತಿದ್ದ ವೇಳೆ ಗಾಡಿ ನಿಯಂತ್ರಣ ತಪ್ಪಿ ಉರುಳಿದೆ. ಹೆಚ್ ಕ್ರಾಸ್ ನಿಂದ ಕೋಲಾರ ಕಡೆ ಬರುತ್ತಿದ್ಧ ಲಾರಿಯಲ್ಲಿ ಅವಘಡ ಸಂಭವಿಸಿದೆ. ಹಸುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡ್ತಿದ್ದ ಹಿನ್ನಲೆ ಲಾರಿಯನ್ನು ಭಜರಂಗದಳ ಕಾರ್ಯಕರ್ತರು ಬೆನ್ನಟ್ಟಿದ್ದರು.
ಭಜರಂಗದಳ ತಂಡ ಲಾರಿ ಬೆನ್ನಟ್ಟುವಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದೆ. ಲಾರಿಯಲ್ಲಿದ್ದ 21 ಹಸುಗಳ ಪೈಕಿ 3 ಹಸುಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾವೆ. ಸ್ಥಳಕ್ಕೆ ವೇಮಗಲ್ ಪೋಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
22/10/2026 05:19 pm
LOADING...