ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ಜೂಜಾಟದ ಆರೋಪಿ ಅರೆಸ್ಟ್ ಮಾಡುವಾಗ ಪತ್ನಿ ಆಕ್ರೋಶ!

ಕೋಲಾರ : ಜೂಜಾಟದ ಆರೋಪಿಯನ್ನು ಬಂಧಿಸದಂತೆ ಪತ್ನಿ ಹಾಗೂ ಮಕ್ಕಳು ಆತ್ಮಹತ್ಯೆ ಬೆದರಿಕೆ ಹಾಕಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ನಿನ್ನೆ ಮುಳಬಾಗಿಲು ನಗರದ ಟೌನ್ ಕ್ಲಬ್ ಮೇಲೆ ಪೊಲೀಸರು ದಾಳಿ ನಡೆಸಿದಾಗ, ಅಲ್ಲಿ ನಿಯಮ ಉಲ್ಲಂಘಿಸಿ ಬೆಟ್ಟಿಂಗ್ ಕಟ್ಟಿಕೊಂಡು ಆರೋಪಿಗಳು ಜೂಜಾಡುತ್ತಿರುವುದು ಕಂಡುಬಂದಿದೆ. ಜೂಜಾಟದಲ್ಲಿ ತೊಡಗಿದ್ದ 20 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಜೂಜಾಟಕ್ಕೆ ಬೆಟ್ಟಿಂಗ್ ಕಟ್ಟಿದ್ದ ₹61 ಸಾವಿರ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ 7ನೇ ಆರೋಪಿ ಲಕ್ಷ್ಮೀನಾರಾಯಣ ಅವರ ಪತ್ನಿ ವಾಣಿ ಹಾಗೂ ಮಕ್ಕಳಾದ ಚರಣ್ ಮತ್ತು ಭಾರ್ಗವ್ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಬೆದರಿಕೆ ಹಾಕಿದ ಆರೋಪದಡಿ ತಾಯಿ ಮತ್ತು ಮಕ್ಕಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Edited By :
PublicNext

PublicNext

26/10/2026 08:39 am

Cinque Terre

4.99 K

Cinque Terre

0