ಕೋಲಾರ: ಕುಡುಗೋಲಿಂದ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಜಮೀನು ಮಾಲೀಕ ದಾಳಿ ಮಾಡಿದ್ದಾನೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ.
ತೆರವು ನಡೆಸಿದ್ದ ಜಮೀನಿಗೆ ಮರಳಲು ಒತ್ತುವರಿದಾರ ಮಾಲೀಕ ಪ್ರಯತ್ನ ಪಟ್ಟಿದ್ದಾರೆ. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗು ಸಿಬ್ಬಂದಿ ಮೇಲೆ ಕುಡುಗೋಲಿಂದ ದಾಳಿ ಮಾಡಲಾಗಿದೆ. ಜಮೀನು ಕಳೆದುಕೊಂಡಿದ್ದ ಚಲಪತಿ ಎಂಬ ವ್ಯಕ್ತಿ ದಾಳಿ ಮಾಡಿದ್ದು ದಾಳಿಯಲ್ಲಿ ಮೂವರು ಅರಣ್ಯ ಇಲಾಖೆ ಸಿಬ್ಬಂದಿಗೆ ಗಾಯಗಳು ಮಾಡಿದ್ದಾರೆ.
ನೂಕಾಟ ತಳ್ಳಾಟ ವೇಳೆ ಅರಣ್ಯ ಇಲಾಖೆ ಜೀಪ್ ನ ಗಾಜು ಪುಡಿ ಪುಡಿ ಆಗಿದೆ. ಒತ್ತುವರಿ ಮಾಡಿಕೊಂಡಿದ್ದ ಜಮೀನು ಪ್ರವೇಶಕ್ಕೆ ಶ್ರೀನಿವಾಸಪುರ ಅರಣ್ಯ ಇಲಾಖೆ ಅಧಿಕಾರಿಗಳ ವಿರೋಧ ವ್ಯಕ್ತ ಆಗಿತ್ತು. ವಾಗ್ವಾದದ ವೇಳೆ ಏಕಾಏಕಿ ಕುಡುಗೋಲಿನಿಂದ ದಾಳಿ ನಡೆಸಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗಳಾದ ನವೀನ್, ಮಂಜುನಾಥ್, ಅನಿಲ್ ಕೈಗೆ ಗಾಯಗಳು ಆಗಿದೆ.
Kshetra Samachara
28/10/2026 06:17 pm
LOADING...