ಕೋಲಾರ : ಶ್ರೀನಿವಾಸಪುರ ಸರ್ಕಲ್‌ನಲ್ಲಿ ಪತಿಯೊಬ್ಬರು ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ನಂದನಬಂಬಳ್ಳಿಯ ಸ್ನೇಹ (23) ಪತಿಯಿಂದಲೇ ಕೊಲೆಯಾದ ಮಹಿಳೆ ಎಂದು ತಿಳಿದುಬಂದಿದೆ. ಕೆಂದಟ್ಟಿ ಗ್ರಾಮದ ರಾಮಚಂದ್ರ ಕೊಲೆ ಮಾಡಿದ ಪತಿ ಎಂದು ತಿಳಿದುಬಂದಿದೆ. ಮೂರಾಂಡಹಳ್ಳಿಯ ಮನೆಗೆ ತೆರಳುವ ವೇಳೆ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾರೆ. ಪತ್ನಿಯ ಶೀಲದ ಬಗ್ಗೆ ಶಂಕಿಸಿ ಕೊಲೆ ಮಾಡಿರುವ ಮಾಹಿತಿ ಇದೆ. ಪತಿ ಮತ್ತು ಪತ್ನಿ ಪದೇಪದೇ ಜಗಳವಾಡುತ್ತಿದ್ದರು ಎನ್ನಲಾಗಿದೆ. ಮೂವರು ಮಕ್ಕಳ ಎದುರೇ ಪತಿ ಪತ್ನಿಯನ್ನು ಕೊಲೆ ಮಾಡಿದ್ದಾರೆ. ಇದರಿಂದ ಮೂವರು ಪುಟ್ಟ ಮಕ್ಕಳು ದಿಕ್ಕು ತೋಚದಂತಾಗಿದ್ದಾರೆ. ಸ್ಥಳಕ್ಕೆ ಎಸ್‌ಪಿ ಕನ್ನಿಕಾ ಸಿಕ್ರಿವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
26/10/2026 01:13 pm
LOADING...