ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಹಾಸನಾಂಬೆ ದರ್ಶನಕ್ಕೆ ಬರೋ ಭಕ್ತರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ!

ಹಾಸನ: ಹಾಸನಾಂಬೆ ದರ್ಶನಕ್ಕೆ ಬರೋ ಭಕ್ತರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ದರ್ಶನಕ್ಕೆ ಬರುವ ಭಕ್ತರಿಗೆ ಎರಡು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಹಾಸನ ಸಂಸದ ಶ್ರೇಯಸ್ ಪಟೇಲ್ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಬಗ್ಗೆ ಶ್ರೇಯಸ್ ಪಟೇಲ್ ಸಂತಸ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಂಸದರು ಮಾತನಾಡಿದ್ದು, ಬೆಂಗಳೂರು- ಹಾಸನ, ಹಾಸನ-ಬೆಂಗಳೂರು ವಿಶೇಷ ಎಕ್ಸ್ಪ್ರೆಸ್ ರೈಲು ಜೊತೆಗೆ ಅರಸೀಕೆರೆ-ಹಾಸನ, ಹಾಸನ-ಅರಸೀಕೆರೆ ಜಂಕ್ಷನ್ ಗೆ ರೈಲುಗಳ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರಿನಿಂದ ಬೆಳಗ್ಗೆ 7.30 ಕ್ಕೆ ಹೊರಟು 11.30ಗಂಟೆಗೆ ಹಾಸನಕ್ಕೆ ತಲುಪಲಿದೆ. ಮಧ್ಯಾಹ್ನ 3.15 ಕ್ಕೆ ಹಾಸನದಿಂದ ಹೊರಟು ಸಂಜೆ 7 ಗಂಟೆಗೆ ರಾಜಧಾನಿ ತಲುಪುವ ರೈಲು ಅರಸೀಕೆರೆಯಿಂದ ಬೆಳಗ್ಗೆ 11.30 ಕ್ಕೆ ಹೊರಟು ಹಾಸನಕ್ಕೆ 12.30 ಮತ್ತೊಂದು ರೈಲು ಹೋಗಲಿದೆ. ಹಾಸನದಿಂದ ಮಧ್ಯಾಹ್ನ 12.45 ಹೊರಟು ಮಧ್ಯಾಹ್ನ 2ಗಂಟೆಗೆ ಅರಸೀಕೆರೆಗೆ ರೈಲು ತಲುಪಲಿದೆ.

Edited By :
PublicNext

PublicNext

23/10/2026 09:09 pm

Cinque Terre

9.61 K

Cinque Terre

0

ಸಂಬಂಧಿತ ಸುದ್ದಿ