ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿಯಲ್ಲಿ ಉತ್ಸಾಹದಿಂದ ಮತ ಚಲಾಯಿಸಿದ ಪದವೀಧರರು

ಅಣ್ಣಿಗೇರಿ: ಪಶ್ಚಿಮ ಕ್ಷೇತ್ರದ ಪದವೀಧರರ ಚುನಾವಣೆ ನಡೆಯುತ್ತಿದ್ದು, ಮುಂಜಾನೆಯಿಂದಲೇ ಪದವೀಧರರು ತಮ್ಮ ಮತ ಚಲಾಯಿಸಲು ಮತಗಟ್ಟೆ ಮುಂದೆ ನಿಂತಿರುವ ದೃಶ್ಯಗಳು ಕಂಡುಬಂದವು. ಇನ್ನು ಪ್ರಥಮ ಬಾರಿಗೆ ತಮ್ಮ ಹಕ್ಕನ್ನು ಚಲಾಯಿಸುತ್ತಿರುವ ಯುವಕ-ಯುವತಿಯರು ಭಾರಿ ಉತ್ಸಾಹದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು.

ಅಣ್ಣಿಗೇರಿ ಪಟ್ಟಣದ ಪುರಸಭೆಯ ಕಚೇರಿಯಲ್ಲಿ ಮತಗಟ್ಟೆ ತೆರೆಯಲಾಗಿದ್ದು, ಪಿಎಸ್‌ಐ ಜನಾರ್ದನ್ ಭಟ್ರಳ್ಳಿ ಅವರು ಮತಗಟ್ಟೆಯ ಸುತ್ತಮುತ್ತ ಹಾಗೂ ಮತಗಟ್ಟೆ ಮುಂದೆ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಬಂದೋಬಸ್ತ್ ಮಾಡಿರುತ್ತಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/10/2026 10:00 pm

Cinque Terre

20.88 K

Cinque Terre

0

ಸಂಬಂಧಿತ ಸುದ್ದಿ