ಹುಬ್ಬಳ್ಳಿ: ಸೋಶಿಯಲ್ ಮೀಡಿಯಾ ಮನರಂಜನೆ, ಮಾಹಿತಿ ಜೊತೆಗೆ ಒಂದಿಲ್ಲೊಂದು ಅವಾಂತರ ಸೃಷ್ಟಿಸುತ್ತಲೇ ಇದೆ. ಈಗ ಕಲಾವಿದೆ ಅಜ್ಜಿಯೊಬ್ಬಳ ಫೇಕ್ ರೀಲ್ಸ್ ಗೆ ಹುಬ್ಬಳ್ಳಿ-ಧಾರವಾಡ ಜನರು ದಂಗಾಗಿದ್ದು, ರೀಲ್ಸ್ ಮಾಡಲು ಹೋಗಿ ಜನರನ್ನು ಗೊಂದಲಕ್ಕೆ ನೂಕಿದ್ದಾಳೆ.
ವಯೋವೃದ್ದೆ ಅಜ್ಜಿ ಮಗುವಿಗೆ ಜನ್ಮ ಅಂತ ವಿಡಿಯೋವೊಂದು ಸಾರ್ವಜನಿಕ ವಲಯದಲ್ಲಿ ವೈರಲ್ ಆಗ್ತಿದೆ. ಆದ್ರೆ ಅದು ರಿಯಲ್ ಅಲ್ಲಾ ರೀಲ್ ಎಂಬುವುದು ಬಹಿರಂಗಗೊಂಡಿದ್ದು, ಸ್ವತಃ ಅಜ್ಜಿಯೇ ಮಾಹಿತಿ ನೀಡಿದ್ದಾರೆ. ಹೌದು.. ಮಗುವಿಗೆ ಜನ್ಮ ನೀಡಿದ್ದೇನೆ, ದೇವರು ಕೊಟ್ಟಿದ್ದಾನೆ ಅಂತ ಅಜ್ಜಿ ರೀಲ್ಸ್ ಮಾಡಿದ್ದು, ಸರ್ಕಾರಿ ಆಸ್ಪತ್ರೆಯೊಂದರಲ್ಲಿ ರೀಲ್ಸ್ ಮಾಡಿರೋ ಅಜ್ಜಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಮಗುವೊಂದನ್ನು ಪಕ್ಕದಲ್ಲಿ ಮಲಗಿಸಿಕೊಂಡು ರೀಲ್ಸ್ ಮಾಡಿರುವ ಸರಿಸುಮಾರು70 ವರ್ಷದ ವೃದ್ದೆ ಮಗುವಿಗೆ ಜನ್ಮ ಅಂತ ವಿಡಿಯೋ ವೈರಲ್ ಆಗಿತ್ತು.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬೋಗೆನಾಗರಕೊಪ್ಪದ ಪಕ್ಕೀರಮ್ಮ ಅನ್ನೋ ಅಜ್ಜಿಯಿಂದ ರೀಲ್ಸ್ ಮಾಡಿದ್ದು, ರೀಲ್ಸ್ ನೋಡಿ ಜನ ಶಾಕ್ ಆಗಿದ್ದರು. ಆದ್ರೆ ಇದು ರಿಯಲ್ ಅಲ್ಲಾ ರೀಲ್ಸ್ ಅನ್ನೋದು ಬೆಳಕಿಗೆ. ನಾನು ಮೊಮ್ಮಗನ ಜೊತೆ ಮಲಗಿದ್ದೆ. ಅನೇಕರು ಬಂದು ಇದು ಯಾರ ಮಗು ಅಂತ ಕೇಳಿದ್ರು. ಅವರಿಗೆ ಸುಮ್ಮನೇ ನಂದೆ ಮಗು ಅಂತ ಹೇಳಿದ್ದೆ. ಅದನ್ನೇ ಕೆಲವರು ರೆಕಾರ್ಡ್ ಮಾಡಿ ಬಿಟ್ಟಿದ್ದಾರೆ ಅಂತಿರೋ ಅಜ್ಜಿಯ ಮಾಹಿತಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಲಭ್ಯವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/11/2026 05:13 pm
LOADING...