ಧಾರವಾಡ: ನಿತ್ಯವೂ ಊಟ ಹಾಕಿ ಪ್ರೀತಿಯಿಂದ ಸಾಕುತ್ತಿದ್ದ ಯಜಮಾನಿ ಮೃತಪಟ್ಟಿದ್ದರಿಂದ ಶ್ವಾನವೊಂದು ಮೃತದೇಹದ ಮುಂದೆ ಕುಳಿತು ಕಣ್ಣೀರು ಹಾಕಿದ ಮನಕಲಕುವ ಘಟನೆ ಧಾರವಾಡ ತಾಲೂಕಿನ ಬೆಳ್ಳಿಗಟ್ಟಿ ಗ್ರಾಮದಲ್ಲಿ ನಡೆದಿದೆ.
ಬೆಳ್ಳಿಗಟ್ಟಿ ಗ್ರಾಮದ ಕಮಲವ್ವ ಪಾಟೀಲ್ ಅವರು ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಪ್ರತಿದಿನ ಶ್ವಾನಕ್ಕೆ ಊಟ ಹಾಕುತ್ತಿದ್ದ ಕಮಲವ್ವ ಅವರ ಸಾವಿನಿಂದ ನಾಯಿ ಮಂಕಾಗಿದೆ. ಯಜಮಾನಿಯ ಮೃತದೇಹದ ಮುಂದೆ ಕುಳಿತು ಮೌನವಾಗಿ ಕಣ್ಣೀರು ಹಾಕಿದ ಶ್ವಾನ, ಅಲ್ಲಿಂದ ಕದಲಲೂ ನಿರಾಕರಿಸಿದೆ.
ಎಷ್ಟು ಬಾರಿ ಹೊರಗೆ ಕಳುಹಿಸಿದರೂ ಮತ್ತೆ ಮೃತದೇಹದ ಬಳಿಯೇ ಬಂದು ಕುಳಿತುಕೊಳ್ಳುತ್ತಿತ್ತು. ಯಜಮಾನಿಯ ಮೇಲಿನ ಅದರ ಪ್ರೀತಿ ಮತ್ತು ನಿಷ್ಠೆಯನ್ನು ಕಂಡ ಗ್ರಾಮಸ್ಥರು ಭಾವುಕರಾದರು. ಪ್ರೀತಿಯಿಂದ ಊಟ ಹಾಕಿದ ಯಜಮಾನಿಗೆ ಶ್ವಾನ ತನ್ನದೇ ರೀತಿಯಲ್ಲಿ ಋಣ ತೀರಿಸಿದೆ ಎಂದು ಗ್ರಾಮಸ್ಥರು ಮಾತನಾಡಿಕೊಂಡರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/10/2026 12:58 pm
LOADING...