ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರ ಜನರಿಗೆ ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗದ ಜನರಿಗೆ ಈಗ ಗುಡ್ ನ್ಯೂಸ್ ನೀಡಲು ಕೆಎಂಸಿ ಆರ್ ಐ ಮುಂದಾಗಿದೆ. ಬಡವರ ಸಂಜೀವಿನಿಯಿಂದ ಈಗ ತಾಯ್ತನದ ಖುಷಿಯನ್ನು ಅನುಭವಿಸುವ ಸುವರ್ಣಾವಕಾಶ ಬಂದೊದಗಿದ್ದು, ಶೀಘ್ರವೇ ಐವಿಎಫ್ ಸೆಂಟರ್ ಆರಂಭಗೊಳ್ಳಲಿದೆ.
ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಐವಿಎಫ್ (ಇನ್ ವಿಟ್ರೋ ಫರ್ಟಿಲೈಜೇಷನ್) ಕೇಂದ್ರ ಆರಂಭಿಸಲು ನಡೆಸಿದ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಶೀಘ್ರವೇ ಸರ್ಕಾರಿ ಸ್ವಾಮ್ಯದ ಮೊದಲ ಐವಿಎಫ್ ಸೆಂಟರ್ ಹುಬ್ಬಳ್ಳಿಯ ಕೆಎಂಸಿ ಆರ್ ಐ ನಲ್ಲಿ ಆರಂಭಗೊಳ್ಳಲಿದೆ. ಸರ್ಕಾರಿ ಸ್ವಾಮ್ಯದ ಮೊದಲ ಐವಿಎಫ್ ಕೇಂದ್ರ ಇದಾಗಿದ್ದು, ವರ್ಷದಿಂದ ವಿವಿಧ ಅನುಮತಿಗಾಗಿ ಕಾಯುತ್ತಿದ್ದ ಕೆಎಂಸಿ ಆರ್ ಐ ಗೆ ಈಗ ಎಲ್ಲ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಶೀಘ್ರವೇ ಆರಂಭಗೊಳ್ಳಲಿದ್ದು, ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.
2021- 22ನೇ ಸಾಲಿನಲ್ಲಿ ಐವಿಎಫ್ ಸೆಂಟರ್ ಆರಂಭಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಸರ್ಕಾರವು ಅನುಮೋದನೆ ನೀಡಿತ್ತು. ಇದಕ್ಕೆ ಹಟ್ಟಿ ಚಿನ್ನದ ಗಣಿ, ಕಲಬುರಗಿಯ ಮಾನವೀಯ ಸಂಸ್ಥೆಯು ಕೈಗಾರಿಕೆಗಳ ಸಾಮಾಜಿಕ ಹೊಣೆಗಾರಿಕಾ ನಿಧಿ (ಸಿಎಸ್ ಆರ್)ಯಡಿ ದೇಣಿಗೆ ಕೊಟ್ಟಿವೆ. ಕೆಎಂಸಿಆರ್ಐನ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ವಿಭಾಗದಲ್ಲಿ 4500 ಚದರಡಿ ಜಾಗದಲ್ಲಿ ಸಿವಿಲ್ ಕಾಮಗಾರಿ ಮುಗಿದಿದೆ. ಸಂಬಂಧಪಟ್ಟ ವೈದ್ಯಕೀಯ ಉಪಕರಣಗಳನ್ನು ಖರೀದಿಸಿ ಅಳವಡಿಸಲಾಗಿದೆ. ಈ ಬಗ್ಗೆ ವೈದ್ಯಕೀಯ ಅಧೀಕ್ಷಕರು ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ನೀಡಿದ್ದಾರೆ ನೋಡಿ..
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/10/2026 09:02 am
LOADING...