ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಡಿಯಲ್ಲಿ ಭಾರಿ ಮಳೆ : ತುಂಬಿ ಹರಿಯುತ್ತಿ ದ್ದ ಹೊಳೆಯನ್ನು ಹಾಯ್ದು ದಡ ಸೇರಿದ ಜನರು

ಚಾಮರಾಜನಗರ : ಗಡಿ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾರೀ ಮಳೆ ಸುರಿದು, ಹೊಳೆಗಳು ತುಂಬಿಹರಿದಿವೆ. ಸಾರ್ವಜನಿಕರು ತಮ್ಮ ಮಕ್ಕಳೊಂದಿಗೆ ತುಂಬಿ ಹರಿಯುತ್ತಿರುವ ಹೊಳೆಯಲ್ಲಿ ನಡೆದು ತಮ್ಮ ಗ್ರಾಮಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿ ರುವ ತಮಿಳುನಾಡಿನ ತಾಳವಾಡಿ ಸುತ್ತಮು ತ್ತಲಿನ ತಿಗಣಾರೆ, ಮಲ್ಲಂಕುಳಿ, ಪಣಕಳ್ಳಿ, ದೊಡ್ಡಗಾಜನೂರು, ಅರಳವಾಡಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಭಾರಿ ಮಳೆ ಸುರಿಯಿತು. ಭಾರಿ ಮಳೆಯಿಂದಾಗಿ ಹೊಳೆಗಳು ತುಂಬಿ ಹರಿದು, ಹೊಳೆಗೆ ಅಡ್ಡಲಾಗಿ ಹಾಗೂ ಹೊಳೆಯ ಬದಿಗಳಲ್ಲಿ ನಿರ್ಮಾಣ ಮಾಡಲಾಗಿರುವ ಅಣೆಕಟ್ಟೆ ಹಾಗೂ ಚೆಕ್ ಡ್ಯಾಂಗಳು ತುಂಬಿ ಹರಿಯುತ್ತಿವೆ. 

ತಿಗಣಾರೆ ಗ್ರಾಮದಿಂದ ಕರಳವಾಡಿಗೆ ಹೋ ಗುವ ದಾರಿಯಲ್ಲಿರುವ ಹೊಳೆ ತುಂಬಿಹರಿ ಯುತ್ತಿದ್ದ ಪರಿಣಾಮ ಸಾರ್ವಜನಿಕರು ತಮ್ಮ ಗ್ರಾಮಕ್ಕೆ ತೆರಳಲು ಹರಸಾಹಸ ಪಡಬೇಕಾಯಿತು. ಕೊನೆಗೆ ವಿಧಿ ಇಲ್ಲದೆ ಸಾರ್ವಜನಿಕರು ತಮ್ಮ ಮಕ್ಕಳ ಕೈಹಿಡಿದು, ತಲೆಯ ಮೇಲೆ ಪಾತ್ರೆ ಹಾಗೂ ಇತರೆ ವಸ್ತುಗಳನ್ನು ಹೊತ್ತು ತುಂಬಿ ಹರಿಯುತ್ತಿದ್ದ ಹೊಳೆಯನ್ನು ಹಾಯ್ದು ದಡ ಸೇರಿದರು.

Edited By : PublicNext Desk
PublicNext

PublicNext

24/10/2026 09:44 am

Cinque Terre

6.42 K

Cinque Terre

0

ಸಂಬಂಧಿತ ಸುದ್ದಿ