ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ : ಹಾಡುಹಗಲೇ ರಸ್ತೆಗಿಳಿದ ದೈತ್ಯ ಹೆಬ್ಬುಲಿ; ವಾಹನ ಸವಾರರು ಆತಂಕ!

ಚಾಮರಾಜನಗರ : ಜಿಲ್ಲೆಯ ಪ್ರಸಿದ್ಧ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಾಡುಪ್ರಾಣಿಗಳ ಸಂಚಾರ ಹೆಚ್ಚಾಗುತ್ತಿದ್ದು, ಇದೀಗ ಬಂಡೀಪುರದಿಂದ ಮಂಗಲ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಹಾಡುಹಗಲೇ ದೈತ್ಯಾಕಾರದ ಹೆಬ್ಬುಲಿಯೊಂದು ಪ್ರತ್ಯಕ್ಷವಾಗಿದೆ.

ರಸ್ತೆಯಲ್ಲಿ ತೆರಳುತ್ತಿದ್ದ ವಾಹನ ಸವಾರರಿಗೆ ಏಕಾಏಕಿ ಹುಲಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಕೆಲಕಾಲ ಬೆಚ್ಚಿಬಿದ್ದು ಆತಂಕಕ್ಕೊಳಗಾಗಿದ್ದಾರೆ. ಹೆಬ್ಬುಲಿಯು ರಸ್ತೆಯ ಪಕ್ಕದಲ್ಲೇ ಕೆಲಕಾಲ ಮುಕ್ತವಾಗಿ ಓಡಾಡಿ, ಬಳಿಕ ನಿಧಾನವಾಗಿ ದಟ್ಟ ಅರಣ್ಯದೊಳಗೆ ತೆರಳಿದೆ.

ಇತ್ತೀಚಿನ ದಿನಗಳಲ್ಲಿ ಚಾಮರಾಜನಗರ ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ನಿರಂತರವಾಗಿ ಹುಲಿಗಳ ಸಂಚಾರ ಹೆಚ್ಚಾಗುತ್ತಿದ್ದು, ಸ್ಥಳೀಯ ಗ್ರಾಮಸ್ಥರು ಹಾಗೂ ವಾಹನ ಸವಾರರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

Edited By : Vinayak Patil
PublicNext

PublicNext

05/11/2026 01:16 pm

Cinque Terre

1.75 K

Cinque Terre

0

ಸಂಬಂಧಿತ ಸುದ್ದಿ