ಗುಂಡ್ಲುಪೇಟೆ : ರಸ್ತೆ ಅಪಘಾತದಲ್ಲಿ ಕೋತಿಯೊಂದು ಮೃತಪಟ್ಟಿದೆ, ಅಂತ್ಯಸಂಸ್ಕಾರ ನೆರವೇರಿಸುವಂತೆ ಬಂದ ಕರೆಯ ಮೇರೆಗೆ ಸ್ಥಳಕ್ಕೆ ತೆರಳಿದ ಹನುಮ ಸೇವಾ ಸಮಿತಿ ಕಾರ್ಯಕರ್ತರಿಗೆ ಅಚ್ಚರಿಯ ಸಂಗತಿ ಎದುರಾಗಿದೆ. ಕೋತಿ ಮೃತಪಟ್ಟಿರಬಹುದೆಂದು ಭಾವಿಸಿದ ಕಾರ್ಯಕರ್ತರು ಹತ್ತಿರದಿಂದ ಗಮನಿಸಿದಾಗ, ಅದು ಇನ್ನೂ ಸ್ವಲ್ಪ ಉಸಿರಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಚಿಕಿತ್ಸೆ ಕೊಡಿಸಲು ಮುಂದಾದರೂ ಅಂದು ಭಾನುವಾರವಾಗಿದ್ದರಿಂದ ವೈದ್ಯರು ಲಭ್ಯವಿರಲಿಲ್ಲ. ಬಳಿಕ ಪಶು ಆಸ್ಪತ್ರೆಯ ವೈದ್ಯರ ಸಲಹೆಯಂತೆ ಔಷಧಿಗಳನ್ನು ತಂದು ಚಿಕಿತ್ಸೆ ನೀಡಲಾಯಿತು.
ನಂತರ ಸತತ ಹತ್ತು ದಿನಗಳ ಕಾಲ ಬೇಗೂರಿನ ಪಶು ಆಸ್ಪತ್ರೆಯಲ್ಲಿ ಕೋತಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಇದೀಗ ಕೋತಿ ಸಂಪೂರ್ಣವಾಗಿ ಚೇತರಿಸಿಕೊಂಡಿದೆ.
ಮೂಕಜೀವದ ಜೀವ ಉಳಿಸುವಲ್ಲಿ ಸಹಕರಿಸಿದ ಪಶು ವೈದ್ಯರಿಗೆ, ಕೋತಿಯನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡು ಆರೈಕೆ ಮಾಡಿದ ಶುಭ ಅಮ್ಮನವರಿಗೆ ಹಾಗೂ ಹನುಮ ಸೇವಾ ಸಮಿತಿಯ ಎಲ್ಲಾ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲಾಗಿದೆ. ಸಾವಿನಂಚಿನಲ್ಲಿದ್ದ ಮೂಕಜೀವಕ್ಕೆ ಮರುಜೀವ ನೀಡಿದ ಈ ಕಾರ್ಯ ಮಾನವೀಯತೆ ಮತ್ತು ಪ್ರಾಣಿ ಪ್ರೀತಿಗೆ ಸಾಕ್ಷಿಯಾಗಿದೆ.
ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್, ಗುಂಡ್ಲುಪೇಟೆ
PublicNext
24/10/2026 12:41 pm
LOADING...