ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸತತ ಮಳೆಗೆ ಹಿಮದ ರಾಶಿ ಹೊದ್ದ ಗೋಪಾಲಸ್ವಾಮಿ ಬೆಟ್ಟ

ಚಾಮರಾಜನಗರ: ಕಳೆದ 3-4 ದಿನಗಳಿಂದ ಸತತ ಮಳೆಯಾಗುತ್ತಿರುವ ಪರಿಣಾಮ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಹಿಮದ ರಾಶಿ ಹೊದ್ದು ಮಲಗಿದ್ದು, ಪ್ರವಾಸಿಗರಿಗೆ ಕಾಶ್ಮೀರದಂತೆ ಭಾಸವಾಗುತ್ತಿದೆ.

ಹಲವು ದಿನಗಳಿಂದ ಉತ್ತಮ ಮಳೆಯಾಗಿರುವ ಹಿನ್ನಲೆ ಪರಿಸರವೆಲ್ಲ ಹಚ್ಚಹಸಿರಿನಿಂದ ಕೂಡಿದ್ದು ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮಂಜಿನ ಚಾದರ ಹೊದ್ದಂತೆ ಕಂಡುಬರುತ್ತಿದೆ.

ಇಡೀ ದೇವಾಲಯ ಆವರಣವೆಲ್ಲಾ ಮಂಜು ಮುಸುಕಿದ್ದು ಒಬ್ಬರ ಮುಖ ಮತ್ತೊಬ್ಬರಿಗೆ ಕಾಣದಷ್ಟು ಹಿಮಾವೃತಗೊಂಡಿದೆ‌. ತುಂತುರು ಮಳೆ ನಡುವೆ ಚುಮುಚುಮು ಚಳಿ, ಹಚ್ಚ ಹಸಿರಿನ ವಾತಾವರಣ ಆನಂದ ಉಂಟು ಮಾಡುತ್ತಿದೆ.

Edited By : Vinayak Patil
PublicNext

PublicNext

27/10/2026 07:04 pm

Cinque Terre

12.03 K

Cinque Terre

0

ಸಂಬಂಧಿತ ಸುದ್ದಿ