ಚಾಮರಾಜನಗರ : ಚಾಮರಾಜನಗರ ಗಡಿಭಾಗ ಹಾಗೂ ತಮಿಳುನಾಡಿನ ತಾಳವಾಡಿ ಅರಣ್ಯ ಪ್ರದೇಶದಲ್ಲಿ ಕಳೆದ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚಾಮರಾಜನಗರದ ಚಿಕ್ಕಹೊಳೆ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ.
ಅರಣ್ಯ ಪ್ರದೇಶದಲ್ಲಿ ಜೋರು ಮಳೆ ಸುರಿಯುತ್ತಿರುವುದರಿಂದ ಕಾಡಿನಂಚಿನ ರಸ್ತೆಗಳಲ್ಲಿ ವಾಹನ ಸಂಚಾರ ದುಸ್ತರಗೊಂಡಿದ್ದು, ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಗಡಿಭಾಗದ ತಾಳವಾಡಿ ತಾಲೂಕಿನಾದ್ಯಂತ ಜನಜೀವನಕ್ಕೆ ಮಳೆಯಿಂದ ಅಲ್ಪ ಮಟ್ಟಿನ ವ್ಯತ್ಯಯ ಉಂಟಾಗಿದೆ.
PublicNext
24/10/2026 03:26 pm
LOADING...