ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಮಿನಿ ಆಟೋದಲ್ಲಿ ಅಕ್ರಮ ಅನ್ಜಭಾಗ್ಯ ಅಕ್ಕಿ ಸಾಗಾಟ - 18 ಚೀಲ ಪಡಿತರ ಅಕ್ಕಿ ಪೋಲಿಸರ ವಶಕ್ಕೆ

ಕೊಪ್ಪಳ : ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ ಮಿನಿ ಆಟೋವನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಜರುಗಿದೆ.

ಹೌದು! ಹೊಸಳ್ಳಿ ಗ್ರಾಮದ ಸಂತೆ ಮೈದಾನ ಹತ್ತಿರ ಶುಕ್ರವಾರ ರಾತ್ರಿ ಮಹೀಂದ್ರ ಕಂಪನಿ ಮಿನಿ ಆಟೋ ಕೆಎ 37ಸಿ 1568 ವಾಹನದಲ್ಲಿ 40 ಕೆಜಿಯ 18 ಚೀಲ ಅಕ್ರಮ ಪಡಿತರ ಅಕ್ಕಿ ಸಾಗಣೆ ಮಾಡುತ್ತಿರುವುದರ ಬಗ್ಗೆ ಸ್ಥಳೀಯರು 112 ವಾಹನಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಮಾಹಿತಿ ಮೇರೆಗೆ ಮುನಿರಾಬಾದ್ ಪೊಲೀಸರು ದಾಳಿ ನಡೆಸಿ ಪಡಿತರ ಅಕ್ಕಿ ಸಾಗಿಸುತಿದ್ದ ವಾಹನ ವಶಪಡಿಸಿಕೊಂಡು ಶನಿವಾರ ಆಹಾರ ನಿರೀಕ್ಷಕ ರವಿಚಂದ್ರ ಸಮ್ಮುಖದಲ್ಲಿ ಪರಿಶೀಲಿಸಿ ದೂರು ದಾಖಲಿಸಲಾಗಿದೆ.

ಸುಮಾರು 16500 ರೂ, ಬೆಲೆ ಬಾಳುವ 18 ಚೀಲ ಅಕ್ಕಿ ಮೂಟೆ ಬಳಸಿದ ವಾಹನ ವಶಪಡಿಸಿಕೊಂಡಿದ್ದು ,ಆರೋಪಿ ವಾಹನ ಚಾಲಕನ ಮೇಲೆ ಮುನಿರಾಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ಅಮರೆಗೌಡ ಮಾಹಿತಿ ನೀಡಿದ್ದಾರೆ.

Edited By :
Kshetra Samachara

Kshetra Samachara

24/10/2026 08:11 pm

Cinque Terre

1.68 K

Cinque Terre

0

ಸಂಬಂಧಿತ ಸುದ್ದಿ