ಕೊಪ್ಪಳ: ಮಹಿಳೆಯರಲ್ಲಿ ಧಾರ್ಮಿಕ ಭಾವನೆ, ಸಾಮಾಜಿಕ ಸಾಮರಸ್ಯ ಹಾಗೂ ಸಮಾನತೆಯ ಮನೋಭಾವ ಬೆಳೆಸುವ ಉದ್ದೇಶದಿಂದ ಹನುಮಸಾಗರದ ಶ್ರೀ ಕರಿಸಿದ್ದೇಶ್ವರ ಮಠದಲ್ಲಿ ತಾಲೂಕು ಮಹಿಳಾ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಅ.31ರಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ಯೋಜನಾ ಕಚೇರಿ ವ್ಯಾಪ್ತಿಯ ಹನುಮಸಾಗರ ವಲಯ ಮತ್ತು ಕಾರ್ಯಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 1,000 ಮಂದಿ ಭಾಗವಹಿಸಿದ್ದರು. ನಡಸೇಶಿಯ ಶ್ರೀ ಷ.ಬ್ರ.108 ಅಭಿನವ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹನುಮಸಾಗರ ವೀರಶೈವ ಸಂಘಟನಾ ಸಮಿತಿಯ ಅಧ್ಯಕ್ಷ ಪ್ರಶಾಂತ್ ಚನ್ನಬಸಪ್ಪ ಗಡಾದ್, ಜನಜಾಗೃತಿ ವೇದಿಕೆಯ ಸದಸ್ಯ ವಿ.ವಿ. ಹಿರೇಮಠ ಭಾಗವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪಳ ಜಿಲ್ಲಾ ನಿರ್ದೇಶಕರಾದ ವಿಠಲ ಪೂಜಾರಿ ಹಾಗೂ ನಿರಂಜನ್ ಎಂ.ಆರ್. ಉಪಸ್ಥಿತರಿದ್ದರು.
Kshetra Samachara
04/11/2026 09:09 pm
LOADING...