ಮಂಗಳೂರು: ಸೂಪರ್ಸ್ಟಾರ್ ರಜನಿಕಾಂತ್ ಅವರ ಸಿನಿಮಾ ಅಂದರೆ ಅದೊಂದು ಬೇರೆಯೇ ಲೋಕ. ತಲೈವಾ ಸಿನಿಮಾಗಳಲ್ಲಿ ಮಾಡುವ ಸ್ಟೈಲಿಷ್ ಆ್ಯಕ್ಷನ್ ಮೂವ್ಮೆಂಟ್ಗಳಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಈಗಾಗಲೇ 'ಜೈಲರ್-2' ಸಿನಿಮಾ ಬಿಡುಗಡೆಯಾಗಿ 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇಂತಹ ಬಿಗ್ ಬಜೆಟ್ ಸಿನಿಮಾದಲ್ಲಿ ತುಳುನಾಡಿನ ಬೆಡಗಿಯೊಬ್ಬರು ನಟಿಸಿದ್ದಾರೆ.
ಹೌದು... ಮಂಗಳೂರಿನ ಕುಳಾಯಿ ಸಮೀಪದ ಹೊನ್ನಕಟ್ಟೆ ನಿವಾಸಿ ಯಶಸ್ವಿನಿ ದೇವಾಡಿಗ ಅವರೇ 'ಜೈಲರ್-2' ಸಿನಿಮಾದಲ್ಲಿ ಪಾತ್ರ ಮಾಡಿದವರು. ಅಂದಹಾಗೆ, ಇವರು ಬಾನಿ ಜೆ. ಅವರ ಡ್ಯೂಪ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಫೈಟಿಂಗ್ ಸೀನ್ಗಳಲ್ಲಿ ಇವರು ಮಿಂಚು ಹರಿಸಿದ್ದಾರೆ. ಸಣ್ಣ ಪಾತ್ರವೊಂದಕ್ಕೆ ಆಡಿಷನ್ ನೀಡಿದ್ದ ಯಶಸ್ವಿನಿ ದೇವಾಡಿಗ ಅವರ ನಟನೆಯನ್ನು ಮೆಚ್ಚಿದ ಚಿತ್ರತಂಡ, ಬಳಿಕ ಇವರಿಗೆ ಬಾನಿ ಜೆ. ಅವರ ಡ್ಯೂಪ್ ಪಾತ್ರವನ್ನೇ ನೀಡಿತ್ತು. ಡ್ಯೂಪ್ ಅವತಾರದಲ್ಲಿ ಯಶಸ್ವಿನಿ ಅದ್ಭುತ ಫೈಟಿಂಗ್ ಸೀನ್ಗಳಲ್ಲಿ ನಟಿಸಿದ್ದಾರೆ.
ವಿಶೇಷವೆಂದರೆ, ಯಶ್ ಅವರ 'ಟಾಕ್ಸಿಕ್' ಸಿನಿಮಾದಲ್ಲೂ ಇವರು ಹುಮಾ ಖುರೇಷಿ ಅವರ ಡ್ಯೂಪ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಹುಮಾ ಖುರೇಷಿ ಅವರ ಪಾತ್ರವು ಯಶ್ ಅವರಿಗೆ ಗನ್ ಪಾಯಿಂಟ್ ಮಾಡುವ ದೃಶ್ಯದಲ್ಲಿ ಕಾಣಿಸುವ ಕೈ ಇದೇ ಯಶಸ್ವಿನಿ ಅವರದ್ದು. ಇದಲ್ಲದೆ, ದರ್ಶನ್ ಅವರ 'ಡೆವಿಲ್' ಹಾಗೂ ಜಾಹೀದ್ ಖಾನ್ ಅವರ 'ಕಲ್ಟ್' ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ. ಒಟ್ಟಿನಲ್ಲಿ, ಇಂತಹ ಪ್ರತಿಭಾವಂತ ನಟಿಗೆ ಮುಂದಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚುವ ಅವಕಾಶ ಒದಗಲಿ ಎಂಬುದೇ ನಮ್ಮ ಆಶಯ.
PublicNext
24/10/2026 09:33 pm
LOADING...