ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಸಕ್ಕರೆ ಗೋದಾಮಿಗೆ ಬೀಗ ಹಾಕಿದ ರೈತರು!

ಮಂಡ್ಯ: ಸಕ್ಕರೆ ಕಾರ್ಖಾನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಂಡ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಒಳಗಿದ್ದ ಟ್ರ್ಯಾಲಿಗಳನ್ನ ಹೊರೆಗೆಳೆದು ಹಾಕಿ ಗೋದಾಮಿಗೆ ಬೀಗ ಜಡಿಯಲಾಗಿದೆ. ಕಬ್ಬಿನ ದರ ನಿಗದಿ ಆಗುವವರೆಗೆ ಸಕ್ಕರೆ ಮಾರಾಟ ಮಾಡಲ್ಲ ಎಂದು ಸಿಎಂ ಮಾತು ಕೊಟ್ಟಿದ್ರು. ಆದ್ರೆ ಸಕ್ಕರೆ ಕಾರ್ಖಾನೆ ಮಾರಾಟ ಮಾಡ್ತಿವೆ ಅಂತ ಸಕ್ಕರೆ ಮಾರಾಟಕ್ಕೆ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದಕ್ಕೂ ಮೊದಲು ಗೋದಾಮಿನ ಬಳಿಗೆ ರೈತಬಿಡಲು ನಿರಾಕರಿಸಿದ್ದ ಮೈಶುಗರ್ ಆಡಳಿತ ಮಂಡಳಿ ವಿರುದ್ಧ ಕೂಡ ರೈತರು ಕಿಡಿಕಾರಿದ್ದಾರೆ. ಇದು ಸಾಂಕೇತಿಕ ಹೋರಾಟ ಆಗಿದೆ. ಬೇಡಿಕೆ ಈಡೇರಿಸದಿದ್ದರೆ ದೊಡ್ಡ ಮಟ್ಟದ ಹೋರಾಟದ ಎಚ್ಚರಿಕೆ ರೈತರು ಕೊಟ್ಟಿದ್ದಾರೆ.

Edited By :
PublicNext

PublicNext

29/10/2026 03:22 pm

Cinque Terre

6.22 K

Cinque Terre

0

ಸಂಬಂಧಿತ ಸುದ್ದಿ