ಮಂಡ್ಯ: ಕಬ್ಬಿನ ದರ ಹೆಚ್ಚಳಕ್ಕೆ ಆಗ್ರಹಿಸಿ ರೈತರು ಪ್ರೊಟೆಸ್ಟ್ ಮಾಡಿದ್ದಾರೆ. ಮೈಶುಗರ್ ಕಾರ್ಖಾನೆಯ ಬಳಿ ರೈತರ ಪ್ರತಿಭಟನೆ ಆರಂಭ ಆಗಿದ್ದು ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಯುತ್ತಿದೆ. ಪ್ರೊ.ನಂಜುಂಡ ಸ್ವಾಮಿ ಮಗಳು ಚುಕ್ಕಿ ನಂಜುಂಡಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಮೈಶುಗರ್ ಕಾರ್ಖಾನೆ ಬಳಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟನ್ ಕಬ್ಬಿಗೆ 5.500 ದರ ನಿಗದಿಗೆ ರೈತರ ಆಗ್ರಹ ಜೋರಾಗಿಯೇ ಕೇಳಿ ಬಂದಿದೆ.
ಮೈಶುಗರ್ ಕಾರ್ಖಾನೆ ಬಳಿ ಸಕ್ಕರೆ ಗೋದಾಮಿಗೆ ಮುತ್ತಿಗೆ ಹಾಕುವ ಲೆಕ್ಕಾಚಾರ ಪ್ರತಿಭಟನಾಕಾರರು ಮಾಡಿ ಕೊಂಡಿರುವ ಹಿನ್ನೆಲೆ ಪೊಲೀಸರ ನಿಯೋಜನೆ ಮಾಡಲಾಗಿದೆ.
PublicNext
29/10/2026 07:06 pm
LOADING...