ಚಿಕ್ಕಬಳ್ಳಾಪುರ:- ಅಮೇಜಾನ್ ಡೆಲಿವರಿ ಕಛೇರಿಯ ಬೀಗ ಮುರಿದು ಕಳ್ಳತನ ಮಾಡಿದ್ದು ಒಂದು ಲಕ್ಷಕ್ಕೂ ಹೆಚ್ಚು ಹಣ ದೋಚಿ ಕಳ್ಳರು ಎಸ್ಕೇಪ್ ಆಗಿದ್ದಾರೆ. ಗೌರಿಬಿದನೂರು ನಗರದ ಪ್ರಶಾಂತನಗರದಲ್ಲಿ ಘಟನೆ ನಡೆದಿದ್ದು ಕಳ್ಳತನದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಸಂಜೆ ಎಂದಿನಂತೆ ದಿನದ ಕಲೆಕ್ಷನ್ ದುಡ್ಡು ಡ್ರಾದಲ್ಲಿ ಇಟ್ಟು ಬೀಗ ಹಾಕಿ ಹೋಗಿದ್ದ ಸಿಬ್ಬಂದಿ, ಮರುದಿನ ಬೆಳಿಗ್ಗೆ ಕಚೇರಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಗೌರಿಬಿದನೂರು ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿ ಕ್ಯಾಮೆರಾದ ದೃಶ್ಯಗಳನ್ನು ಆಧರಿಸಿ ಕಳ್ಳರ ಪತ್ತೆಗೆ ಮುಂದಾದ ಪೊಲೀಸರು ಹುಡುಕಾಟದಲ್ಲಿ ಇದ್ದಾರೆ.
ಗೌರಿಬಿದನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
29/10/2026 04:55 pm
LOADING...