ಭಟ್ಕಳ : ಜಾಗದ ವಿಚಾರವಾಗಿ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಭಟ್ಕಳ ತಾಲೂಕಿನಲ್ಲಿ ನಡೆದಿದೆ.
ಈ ಕುರಿತು ಭಟ್ಕಳ ತಾಲೂಕಿನ ಶಿರಾಲಿ ನಿವಾಸಿ, ರಮೇಶ ತಂದೆ ಮಾಸ್ತಪ್ಪ ನಾಯ್ಕ (50) ಅವರು ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಪ್ರಕಾರ, ರಮೇಶ ಅವರು ಶಿರಾಲಿಯಿಂದ ಗುಡಿಹಿತ್ತಲಿನಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದಾಗ, ಪರಿಚಯದ ಗಿರೀಶ ಶೆಟ್ಟಿ ಅವರ ಜಾಗದ ಸಮೀಪ ಮಣ್ಣಿನ ಲಾರಿ ಬಂದಿರುವ ವಿಚಾರವಾಗಿ ಗಿರೀಶ ಶೆಟ್ಟಿ ಹಾಗೂ ಸ್ಥಳೀಯರ ನಡುವೆ ಮಾತುಕತೆ ನಡೆಯುತ್ತಿತ್ತು.
ಈ ಸಂದರ್ಭದಲ್ಲಿ ಅಲ್ಲಿಗೆ ತೆರಳಿದ ರಮೇಶ ಅವರನ್ನು ಆರೋಪಿತ ದೇವರಾಜ ನಾಯ್ಕ ಎಂಬಾತ ತಡೆದು, "ಇದು ನಿನ್ನ ಜಾಗವಲ್ಲ, ನೀನು ಇಲ್ಲಿಗೆ ಏಕೆ ಬಂದಿದ್ದೀಯಾ?" ಎಂದು ಜಗಳ ತೆಗೆದಿದ್ದಾನೆ ಎನ್ನಲಾಗಿದೆ.
ನಂತರ ದೇವರಾಜ ನಾಯ್ಕ ಇತರ ಆರೋಪಿತರೊಂದಿಗೆ ಸೇರಿಕೊಂಡು ಮಾತಿನ ಚಕಮಕಿ ನಡೆಸಿ, ರಮೇಶ ಅವರ ಬಲ ಭುಜಕ್ಕೆ ಕೈಯಿಂದ ಹೊಡೆದು ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ದೇವರಾಜ ಈಶ್ವರ ನಾಯ್ಕ, ಕಿರಣ ನಾಯ್ಕ, ರವಿ ನಾಯ್ಕ, ನಾರಾಯಣ ನಾಗಪ್ಪ ನಾಯ್ಕ, ಮೊಹಮ್ಮದ್ ಅಸ್ಲಂ, ಚಂದು ಕುಮಾರ ನಾಯ್ಕ ಹಾಗೂ ತರುಣ ಪರಮೇಶ್ವರ ನಾಯ್ಕ ಸೇರಿದಂತೆ ಏಳು ಜನರ ವಿರುದ್ಧ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
PublicNext
30/10/2026 11:12 am
LOADING...