ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ : ಬೈಲೂರಿನಲ್ಲಿ ಆಕಸ್ಮಿಕ ಅಗ್ನಿ ಅವಘಡ: ಮನೆ ಸಂಪೂರ್ಣ ಹಾನಿ

ಭಟ್ಕಳ : ತಾಲೂಕಿನ ಬೈಲೂರು ಗ್ರಾಮದ ಮೂರುಕಟ್ಟೆ ನಿವಾಸಿ ಈಶ್ವರ ನಾಯ್ಕ ಸಸಿಹಿತ್ತಲ ಅವರ ಮನೆಯಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಮನೆ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಮನೆಯ ವಸ್ತುಗಳು ಹಾನಿಗೀಡಾಗಿದ್ದು, ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.

ಅಗ್ನಿ ಅವಘಡದ ವಿಷಯ ತಿಳಿದ ತಕ್ಷಣ ಶ್ರೀ ಮಾಸ್ತಪ್ಪ ನಾಯ್ಕ ಬಲಸೆ ಅವರು ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಮನೆಯನ್ನು ಪರಿಶೀಲಿಸಿದರು. ಬಳಿಕ ಸಂತ್ರಸ್ತ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿ ಸಾಂತ್ವನ ಹೇಳುವುದರ ಜೊತೆಗೆ ಆರ್ಥಿಕ ಸಹಾಯಧನ ನೀಡಿ ಮಾನವೀಯತೆ ಮೆರೆದರು.

ಕಷ್ಟದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬದ ನೆರವಿಗೆ ಧಾವಿಸಿ ಸಹಾಯಹಸ್ತ ಚಾಚಿದ ಮಾಸ್ತಪ್ಪ ನಾಯ್ಕ ಬಲಸೆ ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಬೈಲೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೃಷ್ಣ ನಾಯ್ಕ ಬಲಸೆ, ನಾಗರಾಜ್ ನಾಯ್ಕ, ಚೇತನ್ ನಾಯ್ಕ, ಕೃಷ್ಣ ನಾಯ್ಕ ಹಾಗೂ ಭಾಸ್ಕರ ದೇವಾಡಿಗ ಉಪಸ್ಥಿತರಿದ್ದರು.

Edited By : PublicNext Desk
PublicNext

PublicNext

04/11/2026 07:28 am

Cinque Terre

2.21 K

Cinque Terre

0

ಸಂಬಂಧಿತ ಸುದ್ದಿ