ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: 'ಕೆಎಲ್ ಇ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದವರು ಶಿವಾನಂದ ಕೌಜಲಗಿಯವರು'

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಸಾಧನೆಗಳನ್ನು ಹಂಚಿಕೊಳ್ಳಬೇಕಾದಾಗ, ಮಹತ್ವದ ನಿರ್ಧಾರಗಳಿಗೆ ಹಿರಿಯರ ಸಲಹೆ ಬೇಕಾದಾಗ ನೆನಪಾಗುತ್ತಿದ್ದವರು ಶಿವಾನಂದ ಕೌಜಲಗಿ ಅವರು ಎಂದು ಡಾ. ಪ್ರಭಾಕರ ಕೋರೆ ಭಾವುಕರಾಗಿ ಸ್ಮರಿಸಿದ್ದಾರೆ.

1984ರಲ್ಲಿ ತಾವು ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಾಗಿನಿಂದ ನಾಲ್ಕು ದಶಕಗಳಿಗೂ ಮೀರಿದ ಆತ್ಮೀಯ ಒಡನಾಟ ಹೊಂದಿದ್ದ ಶಿವಣ್ಣ, ತಮ್ಮ ಅನುಭವ, ವಿಶ್ವಾಸ ಮತ್ತು ಮಾರ್ಗದರ್ಶನದ ಮೂಲಕ ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದರು. ರಾಜಕೀಯವಾಗಿ ವಿಭಿನ್ನ ದಾರಿಗಳಲ್ಲಿ ಸಾಗಿದ್ದರೂ, ಕೆಎಲ್‌ಇ ಸಂಸ್ಥೆಯ ಅಭಿವೃದ್ಧಿ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವ ವಿಚಾರದಲ್ಲಿ ಇಬ್ಬರ ಆಶಯ ಒಂದೇ ಆಗಿತ್ತು.

ಸಂಸ್ಥೆಯ ಹಿರಿಯ ಹೆಡ್‌ಮಾಸ್ಟರ್‌ನಂತೆ ಪ್ರತಿಯೊಂದು ಕಾರ್ಯದಲ್ಲೂ ಮಾರ್ಗದರ್ಶನ ನೀಡುತ್ತಿದ್ದ ಅವರು, ಸಂಸ್ಥೆಯ ಸಾಧನೆಗಳನ್ನು ಕಂಡು ಸಂತೋಷ ಪಡುತ್ತಿದ್ದರು. ಹಣೆಯ ತುಂಬ ವಿಭೂತಿ, ಮುಖದಲ್ಲಿ ಸಾತ್ವಿಕ ಕಳೆ, ಮಾತಿನಲ್ಲಿ ಸೌಜನ್ಯ, ನಡೆನುಡಿಯಲ್ಲಿ ಸರಳತೆ ಹಾಗೂ ಜನರ ಭಾವನೆಗಳಿಗೆ ಸ್ಪಂದಿಸುವ ಗುಣ ಹೊಂದಿದ್ದ ಶಿವಣ್ಣನವರ ಅಗಲಿಕೆ ವೈಯಕ್ತಿಕವಾಗಿ ತಮಗೆ ತುಂಬಲಾರದ ನಷ್ಟವಾಗಿದ್ದು, ಅವರು ಇನ್ನು ನಮ್ಮೊಂದಿಗಿಲ್ಲ ಎಂಬ ಸಂಗತಿಯನ್ನು ಮನಸ್ಸು ಒಪ್ಪಿಕೊಳ್ಳುತ್ತಿಲ್ಲ ಎಂದು ಡಾ. ಪ್ರಭಾಕರ ಕೋರೆ ತಮ್ಮ ಭಾವನಾತ್ಮಕ ನುಡಿಗಳಲ್ಲಿ ತಿಳಿಸಿದ್ದಾರೆ.

Edited By :
PublicNext

PublicNext

31/10/2026 07:03 pm

Cinque Terre

8.64 K

Cinque Terre

0

ಸಂಬಂಧಿತ ಸುದ್ದಿ