ಮುಲ್ಕಿ : ಮುಲ್ಕಿ ತಾಲೂಕು ವ್ಯಾಪ್ತಿಯ ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಲೊಟ್ಟು, ಪಂಜಿನಡ್ಕ ರಸ್ತೆಯಲ್ಲಿ ಕಳೆದ ಹತ್ತು ದಿನಗಳಿಂದ ದಾರಿದೀಪಗಳು ಅಸ್ತವ್ಯಸ್ತಗೊಂಡಿದ್ದು, ಈ ಬಗ್ಗೆ ಹಲವು ಬಾರಿ ಮುಲ್ಕಿ ಮೆಸ್ಕಾಂ ಹಾಗೂ ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿಗೆ ತಿಳಿಸಿದರೂ ಪ್ರಯೋಜನವಾಗಿರಲಿಲ್ಲ.
ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜಿನಡ್ಕ, ಮೈಲೊಟ್ಟು, ಬಾನೊಟ್ಟು ರಸ್ತೆ ಮೊದಲೇ ಹೊಂಡಮಯವಾಗಿದ್ದು, ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದೆ. ಈ ನಡುವೆ ರಾತ್ರಿ ಹೊತ್ತು ದಾರಿದೀಪಗಳ ಅವ್ಯವಸ್ಥೆಯಿಂದ ಸಂಚಾರಕ್ಕೆ ಮತ್ತಷ್ಟು ತೊಂದರೆಯಾಗಿದೆ.
ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆ ಹಾಗೂ ಸಿಡಿಲಿನಿಂದ ದಾರಿದೀಪಗಳು ಕೆಟ್ಟುಹೋಗಿದ್ದು, ಈ ಬಗ್ಗೆ ಪಂಚಾಯಿತಿ ಹಾಗೂ ಮೆಸ್ಕಾಂಗೆ ಮನವಿ ಸಲ್ಲಿಸಲಾಗಿತ್ತು.
ಮನವಿ ಸಲ್ಲಿಸಿ ಹತ್ತು ದಿನಗಳಾದರೂ ಮೆಸ್ಕಾಂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಶನಿವಾರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ತೀರ್ಮಾನಿಸಿದ್ದರು. ಆದರೆ, ಪ್ರತಿಭಟನೆಯ ಬಗ್ಗೆ ತಿಳಿದ ಮೆಸ್ಕಾಂ ಕೂಡಲೇ ಎಚ್ಚೆತ್ತುಕೊಂಡು ಶನಿವಾರ ದಾರಿದೀಪಗಳ ದುರಸ್ತಿಗೆ ಮುಂದಾಗಿದೆ ಎಂದು ತಿಳಿದುಬಂದಿದೆ.
Kshetra Samachara
01/11/2026 03:28 pm
LOADING...